ಡ್ರಂಗ್ಸ್ ದಂಧೆ ಆರೋಪ: ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಬೆಳಗ್ಗೆ ಸಿಸಿಬಿ ಅಧಿಕಾರಿ ಗಳು ದಾಳಿ ಮಾಡಿದ್ದಾರೆ.ಇಂದು ಬೆಳಗ್ಗೆ 6:45ರ ಸುಮಾರು ಪೊಲೀಸರು ರಾಗಿಣಿ ಅವರ ಯಲಹಂಕದ ಮನೆ ಪರಿಶೀಲಿ ಸಿದ್ದಾರೆ.

ಇನ್ನೂ ಪರಿಶೀಲನೆ ಜಾರಿಯಲ್ಲಿದೆ. ರಾಗಿಣಿ ಆಪ್ತ ರವಿಶಂಕರ್‌ನ್ನು ಪೊಲೀಸರು ಬಂಧಿಸಿದ್ದಾರೆ. ರಾಗಿಣಿಗೆ ಹಾಜ ರಾಗಲು ನೊಟೀಸ್ ನೀಡಿದ್ದು, ಅನಾ ರೋಗ್ಯ ದ ಕಾರಣದಿಂದ ಸೋಮವಾರ ಹಾಜರಾ ಗುತ್ತೀನಿ ಎಂದು ರಾಗಿಣಿ ಉತ್ತರಿಸಿದ್ದರು.

ನಿನ್ನೆ ವಿಚಾರಣೆ ಹಾಜರಾಗಿಲ್ಲದ್ದರಿಂದ ಸಾಕಷ್ಟು ಸಾಕ್ಷಿ ನಾಶ ಆಗುವ ಅನುಮಾನದ ಮೇರೆಗೆ ಸರ್ಚ್ ವಾರೆಂಟ್ ಸಮೇತ ಶೋಧ ಕಾರ್ಯ ನಡೆಯುತ್ತಿದೆ.


ರವಿಶಂಕರ್ ವಿಚಾರಣೆ ವೇಳೆ ಕಾರ್ತಿಕ್ ರಾಜ್ ಎಂಬಾತನ ಬಗ್ಗೆ ಬಾಯ್ಬಿಟ್ಟಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸ ಲಾಗುತ್ತಿದೆ.

Leave a Reply