ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆಗೆ ಬ್ರೇಕ್

ಬೆಂಗಳೂರು: ಕರೊನಾ ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಂದ ವಸೂಲಿಗೆ ದಂಧೆಗಿಳಿದಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಸ್ವತಃ ಐಪಿಎಸ್​ ಅಧಿಕಾರಿ ಡಿ. ರೂಪಾ ಅವರೇ ಖುದ್ದು ಆಸಕ್ತಿ ವಹಿಸಿದ್ದಾರೆ.

ಬುಧವಾರ ಕರೊನಾ ರೋಗಿಯೊಬ್ಬರಿಗೆ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ 5 ಲಕ್ಷ ರೂ. ಬಿಲ್‌ ಮಾಡಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಗರಂ ಆದ ಸಚಿವರು, ನಿಗದಿತ ದರಕ್ಕಿಂತಲೂ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು. ಕರೊನಾ ರೋಗಿಯೊಬ್ಬರಿಗೆ ಅಪೋಲೋ ಆಸ್ಪತ್ರೆ ಕೊಟ್ಟ 5 ಲಕ್ಷ ರೂ. ಬಿಲ್​ನ ಪ್ರತಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದ ಸಚಿವ ಡಾ.ಕೆ. ಸುಧಾಕರ್​, ಆಸ್ಪತ್ರೆಯ ವಸೂಲಿ ದಂಧೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಸಚಿವರ ಟ್ವೀಟ್​ ಅನ್ನೇ ರೀ ಟ್ವೀಟ್​ ಮಾಡಿಕೊಂಡಿರುವ ಐಪಿಎಸ್​ ಅಧಿಕಾರಿ ಡಿ. ರೂಪಾ, ”ಸಾರ್, ನನಗೆ ಹಾಗೂ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ಎಲ್ಲ ಆಸ್ಪತ್ರೆಗಳ ಜವಾಬ್ದಾರಿ ಕೊಟ್ಟರೆ, ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಪಡಿಸಿದಂತೆ ಇದನ್ನೂ ನಿಭಾಯಿಸುತ್ತೇವೆ ಎಂದು ಸಲಹೆ ನೀಡಿದ್ದಾರೆ.

 
 
 
 
 
 
 

Leave a Reply