ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ, ರಾಷ್ಟ್ರೀಯ ಕ್ರೀಡಾಪಟು ಸಾವು

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ಕ್ರೀಡಾಪಟು ಬಳ್ಳಾರಿಯ ತನ್ನ ಊರಿನಲ್ಲಿ ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.


ಮೊಯುದ್ದೀನ್ ಮೃತ ಯುವಕ. ಈತ ಆಳ್ವಾಸ್ ಪಿಯು ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ಹಳೇ ವಿದ್ಯಾರ್ಥಿ ಯಾಗಿದ್ದು, ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದ್ದರು. ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 100ಮೀಟರ್ ಓಟದಲ್ಲಿ ಕೂಟ ದಾಖಲೆ ಮಾಡಿದ್ದಾರೆ. ಮೊಯುದ್ದೀನ್ ಅವರಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಸಣ್ಣ ಹೆಣ್ಣು ಮಗುವಿದೆ.

 
 
 
 
 
 
 

Leave a Reply