ಕಾಳಜಿ ಇಲ್ಲದ ಸರ್ಕಾರ – ಎಸ್. ಎಸ್. ತೋನ್ಸೆ

 ನಿವೃತ್ತರು ವಯೋಸಹಜ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಿವೃತ್ತಿ ವೇತನದ ಬಹುಪಾಲು ಮೊತ್ತವನ್ನು ಶುಶ್ರೂಷೆಗಾಗಿ ವ್ಯಯ ಮಾಡಬೇಕಾಗುತ್ತದೆ. ಸರಕಾರ ರಚಿಸಿದ್ದ ಸಮಿತಿ ನಗದು ರಹಿತ ಜ್ಯೋತಿ ಸಂಜೀವಿನಿ ವ್ಯೆದ್ಯಕೀಯ ಸೌಲಭ್ಯವನ್ನು ಸರಕಾರಿ ನೌಕರರಿಗೆ ನೀಡು ವಂತೆ ನಿವೃತ್ತರಿಗೆ, ಅವರ ಅವಲಂಬಿತರಿಗೆ ನೀಡುವಂತೆ ಶಿಫಾರಸ್ಸು ಮಾಡಿತ್ತು.

ನಿವೃತ್ತರ ಸಂಘ ಕೆಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದೆ. ಜು. 22ರಂದು ಮುಖ್ಯಮಂತ್ರಿ ಬಿ. ಎಸ್. ಯಡೂರಪ್ಪ ಸಂಘದ ನಿಯೋಗಕ್ಕೆ ಕೇಳಿಕೆ ಈಡೇರಿಸುವ ಭರವಸೆ ನೀಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದರೂ ಕೇಳಿಕೆ ಈಡೇರಿಲ್ಲ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವೃತ್ತರ ಮುಖ್ಯ ಕೇಳಿಕೆಯನ್ನು ಈಡೇರಿಸುವುದರ ಮೂಲಕ ಸರ್ಕಾರಕ್ಕೆ ನಿವೃತ್ತರ ಬಗ್ಗೆ ಕಾಳಜಿ ಇಲ್ಲದಿಲ್ಲವೆಂಬುದನ್ನು ವ್ಯಕ್ತಪಡಿಸುವರೆಂಬ ಆಶಾಭಾವನೆ 5ಲಕ್ಷ ನಿವೃತ್ತರು ಹೊಂದಿರುವರು ಎಂಬುದಾಗಿ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply