Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಕ್ರೀಡಾಸಕ್ತಿ ಬೆಳೆಯಲು ಕ್ರಿಕೆಟ್ ಸಹಕಾರಿ- ಶ್ರೀನಿವಾಸ ಅಮೀನ್.

ಕೋಟ: ವಿಶ್ವದಲ್ಲಿ ನಾನಾ ರೀತಿಯ ಕ್ರೀಡೆಗಳಿವೆ ಆದರೆ ಅದರಲ್ಲಿ ಪ್ರಸಿದ್ಧಿ ಪಡೆದ ಕ್ರೀಡೆ ಎಂದರೆ ಅದು ಕ್ರಿಕೆಟ್ ಈ ದಿಸೆಯಲ್ಲಿ ಕ್ರೀಡಾಸಕ್ತಿಗೆ ಸಹಕಾರಿಯಾಗಿದೆ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಹೇಳಿದ್ದಾರೆ.

ಸಾಲಿಗ್ರಾಮ ಪಾರಂಪಳ್ಳಿ ಪರಿಸರದಲ್ಲಿ ಶನಿವಾರ ಹಾವಳಿ ಪೂಜಾರಿ ಕ್ರೀಡಾಂಗಣದಲ್ಲಿ ಜೈ ಹನುಮಾನ್ ಕ್ರಿಕೆರ‍್ಸ್ ಪಾರಂಪಳ್ಳಿ ವತಿಯಿಂದ ನಡೆಸಲಾದ ಪಾರಂಪಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಕ್ರೀಡಾಸಕ್ತಿ ಪ್ರತಿಯೊರ್ವರಲ್ಲೂ ಬೆಳೆಯಬೇಕು ತನ್ಮೂಲಕ ಹೊಸ ಹೊಸ ಕ್ರೀಡಾಪ್ರತಿಭೆಗಳು ಹೊರಹೊಮ್ಮಬೇಕಿದೆ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸುವ ಮನೋಭಿಲಾಷೆ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟು ರಾಜಾ ಸಾಲಿಗ್ರಾಮ ಹಾಗೂ ರಾಷ್ಟ್ರೀಯ  ಬಾಡಿಬಿಲ್ಡರ್ ರವಿ ಪಾರಂಪಳ್ಳಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಯಮಿ ಜ್ಯೋತಿ ರಮೇಶ್ ಭಂಡಾರಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜೈ ಹನುಮಾನ್ ಕ್ರಿಕೆರ‍್ಸ್ ಅಧ್ಯಕ್ಷ ರಾಜೀವ ಪೂಜಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಟ್ಟಣಪಂಚಾಯತ್ ಸದಸ್ಯರಾದ ಪುನಿತ್ ಪೂಜಾರಿ,ಭಾಸ್ಕರ್ ಬಂಗೇರ,ಉದ್ಯಮಿ ಮಾಧವ ಪೂಜಾರಿ,ಕಿರಣ್ ಗಾಣಿಗ,ಮೂಲ್ಕಿ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ,ಕೋಟ ವಿವೇಕ ಕಾಲೇಜಿನ ನಿವೃತ್ತ ಸಿಬ್ಬಂದಿ ಬಸವ ಪೂಜಾರಿ ಉಪಸ್ಥಿತರಿದ್ದರು. ಸಂಸ್ಥೆಯ ವಿಜೇಂದ್ರ ಸ್ವಾಗತಿಸಿದರು.ಸನ್ಮಾನಪತ್ರ ಶಿಕ್ಷಕ ಕೃಷ್ಣ ಪೂಜಾರಿ ವಾಚಿಸಿದರು.
ಕಾರ್ಯಕ್ರಮವನ್ನು ಶಿಕ್ಷಕ ಶೇಖರ್ ಪೂಜಾರಿ ನಿರೂಪಿದರು.

ಸಾಲಿಗ್ರಾಮ ಪಾರಂಪಳ್ಳಿ ಪರಿಸರದಲ್ಲಿ ಶನಿವಾರ ಹಾವಳಿ ಪೂಜಾರಿ ಕ್ರೀಡಾಂಗಣದಲ್ಲಿ ಜೈ ಹನುಮಾನ್ ಕ್ರಿಕೆಟರ್ಸ್ ವತಿಯಿಂದ ನಡೆಸಲಾದ ಪಾರಂಪಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಷ್ಟç ಮಟ್ಟದ ಕ್ರೀಡಾಪಟು ರಾಜಾ ಸಾಲಿಗ್ರಾಮ ಹಾಗೂ ರಾಷ್ಟ್ರೀಯ  ಬಾಡಿಬಿಲ್ಡರ್ ರವಿ ಪಾರಂಪಳ್ಳಿ ಇವರನ್ನು ಸನ್ಮಾನಿಸಲಾಯಿತು. ಜೈ ಹನುಮಾನ್ ಕ್ರಿಕೆರ‍್ಸ್ ಅಧ್ಯಕ್ಷ ರಾಜೀವ ಪೂಜಾರಿ ಪಟ್ಟಣಪಂಚಾಯತ್ ಸದಸ್ಯರಾದ ಪುನಿತ್ ಪೂಜಾರಿ,ಭಾಸ್ಕರ್ ಬಂಗೇರ,ಉದ್ಯಮಿ ಮಾಧವ ಪೂಜಾರಿ,ಕಿರಣ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!