ಕೊರೋನಾ ಸೋಂಕಿತರ ಆರೈಕೆ: ಕೇಂದ್ರ ಸರ್ಕಾರಿ ನೌಕರರು ಪಡೆಯಬಹುದು 15 ದಿನಗಳ ವಿಶೇಷ ರಜೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಪೋಷಕರು ಅಥವಾ ಕುಟುಂಬದ ಯಾವುದೇ ಅವಲಂಬಿತ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದ್ದರೆ 15 ದಿನ ವಿಶೇಷ ಸಾಂದರ್ಭಿಕ ರಜೆ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ 15 ದಿನಗಳ ವಿಶೇಷ ಸಾಂದರ್ಭಿಕ ರಜೆಯ (ಎಸ್‌ಸಿಎಲ್‌) ಅವಧಿ ಮುಗಿದ ನಂತರವೂ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ, ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೆ ಇತರ ಯಾವುದೇ ರೀತಿಯ ರಜೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ‌ ಹೇಳಿದೆ.

ನೌಕರರು ಕೊರೋನಾ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದರೆ, ಹೋಂ ಕ್ವಾರಂಟೈನ್‌ ಆಗಿದ್ದರೆ ಅವರಿಗೆ ಏಳು ದಿನಗಳವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲಾಗುವುದು ಎಂದೂ ಕೇಂದ್ರ ಸರ್ಕಾರ ಹೇಳಿದೆ.

 
 
 
 
 
 
 
 
 
 
 

Leave a Reply