Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಕುಣಿಯಲು ಬಾರದವ ರಂಗಸ್ಥಳ ಓರೆ… ಎಂದಂತಾಯಿತು ಶೋಭಾ ಕರಂದ್ಲಾಜೆ ಪಾಡು! ಮಾಜಿ ಸಚಿವ ವಿನಯಕುಮಾರ್ ಸೊರಕೆ 

ಕೊರೊನಾ ನಿರ್ವಹಣೆಯಲ್ಲಿ  ಸಂಪೂರ್ಣವಾಗಿ ವಿಫಲಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ​ ವೈಫಲ್ಯವನ್ನು ನಿರ್ದಿಷ್ಟ ಸಮುದಾಯದ ಮೇಲೆ ಹೊರಿಸಿ ನುಣುಚಿಕೊಳ್ಳುವ ಚಾಳಿಯನ್ನು ಸಂಸದೆ ಶೋಭಾ​ ಕರಂದ್ಲಾಜೆ ಮತ್ತೆ  ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲೆಗೆ ನೀಡಿದ ಅಪರೂಪದ ಭೇಟಿಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಯವರು, ಕೋವ್ಯಾಕ್ಸಿನ್​ ಲಸಿಕೆ ಪಡೆಯಬಾರದೆಂದು ಚರ್ಚುಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂಬ ಅಸಂಬದ್ಧ ಮತ್ತು ಅಸತ್ಯವಾದ​ ಹೇಳಿಕೆಯನ್ನು ನೀಡುವ ಮೂಲಕ ಇಡೀ ಕ್ರೈಸ್ತ ಸಮುದಾಯವನ್ನು ಸಂಸದೆಯು ನಿಂದಿಸಿರುವುದು ಆಕ್ಷಮ್ಯ ಮತ್ತು ಖಂಡನೀಯ ಎಂದು ಮಾಜಿ ಸಚಿವರು ಹೇಳಿರುತ್ತಾರೆ.

ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಇನ್ನೊಂದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು​ ಗುರಿಯಾಗಿಸಿದ್ದರೆ, ಇದೀಗ ಎರಡನೇ ಅಲೆಯ ನಿರ್ವಹಣೆಯಲ್ಲಾದ ತಮ್ಮ ವೈಫಲ್ಯವನ್ನು ಮರೆಮಾಚಲು ಕ್ರೈಸ್ತ​ ಸಮುದಾಯದವನ್ನು ಗುರಿಯಾಗಿಸಿ ನಿಂದನಾರ್ಹ ಹೇಳಿಕೆ ನೀಡುವ ಮೂಲಕ ಸಂಸದೆ ಮತ್ತೊಮ್ಮೆ ತನ್ನೊಳಗಿರುವ ಅಲ್ಪಸಂಖ್ಯಾತ ವಿರೋಧಿ ನಂಜನ್ನು ಹೊರ ಹಾಕಿದ್ದಾರೆ.

ಕೊರೊನಾ ನಿರ್ವಹಣೆ ಹಾಗೂ ವ್ಯಾಕ್ಸಿನೇಶನ್ ಕೊಡಿಸುವುದರ ಬಗ್ಗೆ ಜನತೆಯ ಪರವಾಗಿ ತನ್ನ ಜವಾಬ್ದಾರಿಯನ್ನು​ ನಿಭಾಯಿಸಿ ಕಾರ್ಯನಿರ್ವಹಿಸುವುದನ್ನು ಬಿಟ್ಟು , ಕಾಟಾ​ ​ಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿಯಿತ್ತು ಒಂದಲ್ಲ ಒಂದು​ ವಿವಾದಾಸ್ಪದ ಹೇಳಿಕೆಯನ್ನು ನೀಡಿ ಜಾತಿ-ಧರ್ಮದ ಮಧ್ಯೆ ಕಂದಕವನ್ನು ಸೃಷ್ಟಿಸಿ ಜಿಲ್ಲೆಯ ಸಾಮರಸ್ಯವನ್ನು​ ​ಕೆಡಿಸುವ ತನ್ನ ಚಾಳಿಯನ್ನು ಬಿಟ್ಟು ಜನರ ಜೀವ ಉಳಿಸುವ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುವುದು​ ಸಮಂಜಸ ಎಂದು ಮಾಜಿ ಸಚಿವರು ಹೇಳಿದ್ದಾರೆ.

ದೇಶದ  ಅಭಿವೃದ್ಧಿಗಾಗಿ ವಿಶೇಷವಾಗಿ ಹಲವಾರು ಪ್ರಸಿದ್ಧ ಹಾಗೂ ಪ್ರಮುಖ ಶಿಕ್ಷಣ ಸಂಸ್ಥೆಗಳ ಸ್ಥಾಪನೆ,​ ಹಲವಾರು ವೈದ್ಯಕೀಯ ಶಿಕ್ಷಣ ಕೇಂದ್ರಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವುದರ ಮೂಲಕ ದೇಶಕ್ಕೆ  ಕ್ರೈಸ್ತ​ ಸಮುದಾಯದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ.
ಪ್ರಸ್ತುತ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ​ ವಿಫಲವಾಗಿದ್ದು ದೇಶದ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿ ಛೀಮಾರಿ ಹಾಕಿ​ದ್ದಾರೆ.  ​  
 
ಅಂತಾರಾಷ್ಟ್ರೀಯ ಮಟ್ಟದಲ್ಲೂ ಸರ್ಕಾರವು ಟೀಕೆಗೆ​ ಗುರಿಯಾಗಿದೆ. ಜನ ಸಾಮಾನ್ಯರ ಗಮನ ವನ್ನು ಬೇರೆಡೆಗೆ ಸೆಳೆಯಲು ತನ್ನ ಸಂಸದರಿಗೆ ಸರ್ಕಾರವು ನೀಡಿರುವ ಸೂಚನೆ ಯಂತೆ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!