ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ಬಿಡದ ಗೋವುಗಳ ಹಿಂಡು 

ಭಾವಿಸಮೀರ ವಾದಿರಾಜ ಗುರುಸಾರ್ವ ಭೌಮರು ತಮ್ಮ “ರುಗ್ಮಿಣೀಶವಿಜಯ” ಮಹಾಕಾವ್ಯದಲ್ಲಿ ಕೃಷ್ಣ ಪರಮಾತ್ಮ ತನ್ನ ಪ್ರಿಯರಾದ ಗೋಪಾಲರು ಹಾಗೂ ಗೋವು ಗಳಿಂದ ಕೂಡಿಕೊಂಡು ವೃಂದಾವನವನ್ನು ಪ್ರವೇಶಿಸುವ ಸಂದರ್ಭವನ್ನು ಸುಂದರವಾಗಿ ವರ್ಣಿಸಿದ್ದಾರೆ .

ಗವಾಂ ಖುರೈರ್ಗೋಪಪದೈರನೋಭಿ: ಸಮುತ್ಥಧೂಲೀ ಸವಿತು: ಕರೌಘಂ ।
ರುರೋಧ ದೂರೇ ಕಿಲ ತಾಂ ಸ್ವಮೂರ್ಧ್ನಿ ಸ ಏವ ವೋಢುಂ ಧ್ರುವಮುನ್ನಿನಾಯ ।।

ಗೋಪಾಲಕನಾದ ಶ್ರೀಕೃಷ್ಣಪರಮಾತ್ಮ ಗೋವು ಗಳು ಹಾಗೂ ಗೋಪಾಲಕರಿಂದ ಕೂಡಿಕೊಂಡು ವೃಂದಾವನದ ಮಾರ್ಗದಲ್ಲಿ ತೆರಳುವಾಗ, ಆ ಗೋವುಗಳ ಗೊರಸುಗಳ ತಿಕ್ಕಾಟದಿಂದ ಹಾಗೂ ಗೋಪಾಲಕರ ಪಾದಸ್ಪರ್ಶದಿಂದ ಆ ಭೂಭಾಗ ದಿಂದ ಎದ್ದಂತಹ ಧೂಳಿನ ಕಣಗಳು ಆಕಾಶ ಮಂಡಲವನ್ನೇ ಆವರಿಸಿದವು. ಸೂರ್ಯನ ಪ್ರಖರವಾದ ಕಿರಣಗಳೂ ಭೂಮಿಯನ್ನು ತಾಕಲು ಅಸಮರ್ಥವಾದವು.

ಆಕಾಶದಲ್ಲಿ ಆವರಿಸಲ್ಪಟ್ಟ ಧೂಳಿನ ಕಣಗಳೇ ಆ ಸೂರ್ಯನ ಕಿರಣಗಳನ್ನು ತಡೆದವು. ಒಂದರ್ಥ ದಲ್ಲಿ ಮೋಡ ಕವಿದ ವಾತಾವರಣದಂತೆ ಆ ಪ್ರದೇಶವು ಭಾಸವಾಗುತ್ತಿತ್ತು.

ಸಾಮಾನ್ಯರಿಗೆ ಇಷ್ಟು ಮಾತ್ರ ಕಂಡರೆ ವಾದಿರಾಜ ಗುರುಸಾರ್ವಭೌಮರು ಈ ಸನ್ನಿವೇಶವನ್ನು ನಿರೂಪಿಸುತ್ತಾ , ದಿನಕರ ನಾದ ಸೂರ್ಯನೇ ತನ್ನ ಕಿರಣಗಳೆನ್ನುವ ಕೈಗಳನ್ನು ಚಾಚಿ ಆ ಕೃಷ್ಣನ ಸಂಘವನ್ನು ಪಡೆದಿರುವ ಗೋವುಗಳ ಹಾಗೂ ಗೋಪಾಲಕರ ಪಾದಧೂಳಿಯನ್ನು ಶಿರಸ್ಸಿನಲ್ಲಿ ಧರಿಸುವುದಕ್ಕಾಗಿ ಉತ್ಸುಕ ನಾದಂತೆ ಕಾಣುತ್ತಿದೆ ಎಂದು ಈ ಸುಂದರ ಸಂದರ್ಭವನ್ನು ನಿರೂಪಿಸಿ ದ್ದಾರೆ .

ರಾಜರು ನಿರೂಪಿಸಿದ ಚಿತ್ರಣವನ್ನು ಕಣ್ಣಾರೆ ಕಂಡಂತೆ ಆದದ್ದು ಆ ಗುರುರಾಜರ ಪೀಠದಲ್ಲೇ ಬಂದಿರುವ ಶ್ರೀ ವಿಶ್ವೋತ್ತಮ ತೀರ್ಥರ ಕರಕಮಲಸಂಜಾತರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ “ಕಾಮಧೇನು ಗೋ ಸಂರಕ್ಷಣಾ ಕೇಂದ್ರ” ಇದರ ಭೇಟಿಯ ಸಂದರ್ಭದಲ್ಲಿ.

ಈ ಸಂಸ್ಥೆಯು ಶ್ರೀ ವಿಶ್ವೋತ್ತಮ ತೀರ್ಥ ರಿಂದ ಸ್ಥಾಪಿತವಾಗಿದ್ದು ವಿಶ್ವವಲ್ಲಭತೀರ್ಥ ಶ್ರೀಪಾದ ರಿಂದ ಅತ್ಯಂತ ಉತ್ತಮವಾಗಿ ಅಭಿವೃದ್ಧಿಯನ್ನು ಹೊಂದಿ ರಾಜರ ಅವತಾರ ಕ್ಷೇತ್ರವಾದ ಹೂವಿನ ಕೆರೆಯಲ್ಲಿಯೇ ಕಂಗೊಳಿಸುತ್ತಿದೆ.

ಗೋಶಾಲೆಗೆ ಶ್ರೀಪಾದರ ಭೇಟಿಯ ಸಂದರ್ಭ ದಲ್ಲಿ ಆ ಗೋಪಾಲಕನಾದ ಶ್ರೀಕೃಷ್ಣನ ವೇಣು ನಾದಕ್ಕೆ ಗೋವುಗಳೆಲ್ಲಾ ತಲೆದೂಗುತ್ತಾ ಕೃಷ್ಣನನ್ನು ಹಿಂಬಾಲಿಸಿದಂತೆ, ಕೃಷ್ಣನ ಆರಾಧಕರಾದ ಶ್ರೀಪಾದರ ಆಗಮನದಿಂದಲೇ ಬೆಂಬಿಡದೆ ಗೋವುಗಳು ಶ್ರೀಪಾದರನ್ನು ಅನುಸರಿಸಿದವು. ಇಂತಹ ಮುಗ್ಧವಾದ ನಿರ್ವ್ಯಾಜವಾದ ಪ್ರೀತಿಯನ್ನು ಗೋಮಾತೆಯಲ್ಲಿ ಅಲ್ಲದೆ ಬೇರೆಲ್ಲಿ ಕಾಣಲು ಸಾಧ್ಯ ?

ಗೋವುಗಳ ಮೇಲೆ ಶ್ರೀಪಾದರಿಗೆ ಹೇಗೆ ನಿರ್ವ್ಯಾಜವಾದ ಪ್ರೀತಿಯೋ ಅದರಂತೆ ಗೋವುಗಳಿಗೂ ಶ್ರೀಪಾದರ ಮೇಲೆ ನಿರ್ವ್ಯಾಜ ವಾದ ಪ್ರೀತಿ. ಏಕೆಂದರೆ ಈ ಗೋಶಾಲೆಯಲ್ಲಿ ಇರುವ ಗೋವು ಗಳೆಲ್ಲವೂ ಇನ್ನೂ ತಮಗೇನು ಇದರಿಂದ ಪ್ರಯೋಜನವಿಲ್ಲ ಎಂದು ಮನೆಯಿಂದ ಹೊರಗಟ್ಟಿದ ಗೋವುಗಳು ಅಂದರೆ ಬರಡು ಹಸುಗಳು.

ಕಸಾಯಿಖಾನೆಯ ಪಾಲಾಗುತ್ತಿದ್ದ ಅದೆಷ್ಟೋ ಗೋವುಗಳನ್ನು ತಂದು ಅವುಗಳಿಗೆ ಸ್ವಚ್ಛಂದ ವಿಹಾರಕ್ಕೆ ಅವಕಾಶವನ್ನು ಮಾಡಿಕೊಟ್ಟು ಆಹಾರ ಉಪಚಾರಗಳನ್ನು ನೀಡಿ ಸಲಹುತ್ತಿರುವವರು .“ಗಾವೋ ವಿಶ್ವಸ್ಯ ಮಾತರ:” ಎಂದು ಬಾಯಿಯಲ್ಲಿ ನುಡಿಯುತ್ತಾ ಪರಿಪಾಲಿಸುತ್ತಾ ಬಂದವರು ನಾವು . ಜಗತ್ತಿಗೆ ತಾಯಿಯ ಸ್ಥಾನದಲ್ಲಿ ನಿಂತು ನಮ್ಮೆಲ್ಲರ ಅವಶ್ಯಕತೆಗಳನ್ನೂ ಪೂರೈಸುವ ಗೋಮಾತೆಯ ರಕ್ಷಣೆಯಲ್ಲಿ ಶ್ರೀಪಾದರು ಕಟಿಬದ್ಧರಾಗಿದ್ದಾರೆ.

ಅವರ ಈ ಕಾರ್ಯದಲ್ಲಿ ಯಥಾಶಕ್ತಿ ನಮ್ಮ ಅಳಿಲು ಸೇವೆಯನ್ನಾದರೂ ಸಮರ್ಪಿಸಿ ಕೃತಾರ್ಥ ರಾಗೋಣ. ಮುದಿಯಾದ ಗೋವುಗಳಿಗೆ ಸಲ್ಲಿಸುವ ಈ ನಮ್ಮ ಸೇವೆ ಯಿಂದಾಗಿ ನಮ್ಮ ಮುದಿತನದಲ್ಲಿ ಅನಾಥಾಶ್ರ ಮದ ಪಾಲಾಗದಂತೆ ಮಾತೃಸ್ವರೂಪಳಾದ ಆ ಗೋಮಾತೆಯಲ್ಲಿ ಪ್ರಾರ್ಥಿಸೋಣ.

Shri Kamadhenu Go Samrakshana Kendra Huvinakere
Karnataka Bank Car street Udupi
A/C: 802200101182301
IFSC: KARB0000802

ಬರಹ : ವಿದ್ವಾನ್ ಸಂಕರ್ಷಣ ಅಡಿಗ

 
 
 
 
 
 
 
 
 
 
 

Leave a Reply