ಸಂಸ್ಕೃತ ಸರಸ್ವತಿಯ ಶತಮಾನದ ಆರಾಧಕ ಎನ್.ಎಲ್.ಬಿ.~ ಪಲಿಮಾರು ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು

ಸಂಸ್ಕೃತ  ಸರಸ್ವತಿಯ ಆರಾಧನೆಯಲ್ಲೇ ನಲವತ್ತು ವರ್ಷಗಳನ್ನು ಕಳೆದ ಮಹಾ ಸೌಭಾಗ್ಯವಂತ ಎನ್ನೆಲ್ಬಿ(ಎನ್ಲಕ್ಷ್ಮೀನಾರಾಯಣ ಭಟ್ಟ). ಪೂರ್ವ ಶತಮಾನಗಳ ಉದ್ರಂಥವನ್ನೂ ಸಾಣೆಗಲ್ಲಿಗೆ ಹಚ್ಚುವಂತಹ ಇವರಂತಹ ಉದ್ದಾಮ ಪಂಡಿತರು ಈ ಶತಮಾನದಲ್ಲೂ ಇದ್ದಾರೆ ಎಂಬುವುದು ಸಂಸ್ಕೃತ ಮತ್ತು ಶಾಸ್ತ್ರಗಳ ಜೀವಂತಿಕೆಗಳ ಸಾಕ್ಶಿಯಾಗಿದೆ ಎಂದು ಪಲಿಮಾರು ಮಠದ ಶ್ರೀಶ್ರೀ ವಿದ್ಯಾಧೀಶತೀರ್ಥಶ್ರೀಪಾದರು ಹರಸಿದರು. ಶ್ರೀಗಳವರು ಈ ಮೂಲಕ ಡಾ. ಎನ್.  ಲಕ್ಷ್ಮೀನಾರಾಯಣ   ಭಟ್ಟರ ಅಭಿನಂದನಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.

ಸುದೀರ್ಘ ಕಾಲದ ಪಾಠನಾನುಭವದ ಭಟ್ಟರು ನಿರಂತರ ನಮ್ಮ ಕಾಲೇಜಿನ ಆಸ್ತಿಯಾಗಬೇಕು. ಅಸದೃಶ ಪಾಂಡಿತ್ಯ ಇನ್ನಷ್ಟು ಜನಮಾನಸವನ್ನು ಬೆಳಗುವಂತಾಗಲಿ. ನಿವೃತ್ತಿಯೆಂಬುದು ಸರಕಾರದ ವತಿಯಿಂದಲೇ ಹೊರತು ಸರ್ವ ರೀತಿಯಿಂದಲ್ಲ ಎಂದು ಅಧ್ಯಕ್ಷತೆಯನ್ನು ವಹಿಸಿದ ಪರ್ಯಾಯ ಪಿಠಾಧೀಶರಾದ ಶ್ರೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕರಾದ ಹರಿನಾರಾಯಣ ದಾಸ ಆಸ್ರಣ್ಣ ಮಾತನಾಡಿ, ಸಂಸ್ಕತಕ್ಕಾಗಿ ಸಂಸ್ಕೃತ ಕಾಲೇಜಿಗಾಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಮಹನೀಯರು. ವಿದ್ಯಾರ್ಥಿಗಳನ್ನು ತಿದ್ದುವ ಇವರ ಚಾಣಾಕ್ಷತನ ಅದ್ಭುತವಾಗಿದೆ. ಭಟ್ಟರ ಪ್ರೀತಿಯೇ ವಿದ್ಯಾರ್ಥಿಗಳಲ್ಲಿ ಕೆಲಸ ಮಾಡಿಸುತ್ತಿತ್ತದೆ. ಸಂಘಟನಾ ಕಲೆ ಅತ್ಯಂತ ಅಪೂರ್ವವಾಗಿದೆ. ಈ ಎಲ್ಲಾ ಗುಣಗಳಿಗೆ ಪುಟವಿಟ್ಟದ್ದು ಅದ್ಭುತವಾದ ವಿದ್ವತ್ತು ಎಂದು ಹೇಳಿದರು.

 

ಪ್ರಸಿದ್ಧ ಆಗಮ ಪಂಡಿತರಾದ ಪಂಜ ಭಾಸ್ಕರ ಭಟ್ ಮಾತನಾಡಿ  ಲಕ್ಷ್ಮೀನಾರಾಯಣ ಭಟ್ಟರು ಕಾಲೇಜಿನ ಏಳಿಗೆಗಾಗಿ ನಡೆಸಿದ ಶ್ರಮ ನಿಸ್ವಾರ್ಥ ಶುದ್ಧ ಚಾರಿತ್ರಿಯ  ಮತ್ತು ಶುದ್ಧ ಹಸ್ತ ಇವರ ಯಶಸ್ಸಿನ ಹಿನ್ನೆಲೆಯಾಗಿದೆ. ಕಾರ್ಯದಕ್ಷತೆ, ಪೂರ್ವೋತ್ತರ ಸಾಧಕ-ಬಾಧಕಗಳ ಚಿಂತನೆ, ವ್ಯವಸ್ಥಿತ ಮತ್ತುತ್ಯಾಗಮನೋಭಾವದಿಂದ ಕೂಡಿದ್ದು ಅನ್ಯಾದೃಶವಾಗಿದೆ. ಸಂಸ್ಕೃತ ಕಾಲೇಜೊಂದನ್ನು ಹೇಗೆ ರೂಸಬೇಕು ಎಂಬುದಕ್ಕೆ ಆದರ್ಶ ಪ್ರಾಯರಾದವರು ಲಕ್ಷ್ಮೀನಾರಾಯಣ ಭಟ್ಟರು ಎಂದರು.

ಸನ್ಮಾನವನ್ನು ಸ್ವೀಕರಿಸಿದ  ಲಕ್ಷ್ಮೀನಾರಾಯಣ ಭಟ್ಟರು, ಗುರುಗಳ ಸಂಸ್ಕೃತ ತಜ್ಞರ ಸಮ್ಮುಖದಲ್ಲಿ ನಡೆದದ್ದು ಸಮ್ಮಾನವಲ್ಲ ಇದು ನನಗೆ ಮಾಡಿದ ಪರಮಾನುಗ್ರಹ ಎಂದು ತಿಲಿಯುತ್ತೇನೆ. ನಾನು ಸೊನ್ನೆ ಸೊನ್ನೆಯ ಜೊತೆಗೆ ಬೆಂಬಲವಾಗಿ ನಿಂತವರಿ೦ದಾಗಿ ಈ ಸೊನ್ನೆಗೆ ಬಲ ಮತ್ತು ಬೆಲೆ ಬಂದಿತು ಎಂದು ಹೇಳಿದರು.

ಪರ್ಯಾಯಶ್ರೀಪಾದರು ಮತ್ತು ಪಲಿಮಾರು ಮಠಾಧೀಶರು ಲಕ್ಷ್ಮೀನಾರಾಯಣ ಭಟ್ಟ ದಂಪತಿಗಳನ್ನು ಸನ್ಮಾನಿಸಿದರು.  ಸನ್ಮಾನಪತ್ರವನ್ನು ಡಾ.ಷಣ್ಮುಖ ಹೆಬ್ಬಾರ್ ವಾಚಿಸಿದರು. ವಿದ್ಯಾರ್ಥಿಗಳಾದ ಮುರಳೀಕೃಷ್ಣ ಶರ್ಮಾ ಮತ್ತು ನಂದಕುಮಾರ

ವೇದ ಘೋಷಗೈದರು. 
ಶ್ರೀಮನಮಧ್ವಸಿದ್ಧಾಂತ ಪ್ರಬೋಧಕಸಂಸ್ಕೃತಾಧ್ಯಯನ ಕೇಂದ್ರದ ಪ್ರಭಾರ ಪ್ರಾಂಶುಪಾಲ ಪ್ರೋ.ಹರಿದಾಸ ಭಟ್ ಇವರು ಸ್ವಾಗತಿಸಿದರು. ಎಸ್.ಎಮ್.ಎಸ್.ಪಿ ಸಭೆಯ ಕಾರ್ಯದರ್ಶಿಗಳಾದ ಶ್ರೀಯುತ ದೇವಾನಂದ ಉಪಾಧ್ಯಾಯ ಉಪಸ್ಥಿತರಿದ್ದರು. ಕೋಶಾಧಿಕಾರಿಗಳಾದ ಚಂದ್ರಶೇಖರ ಆಚಾರ್ಯ ಧನ್ಯವಾದವಿತ್ತರು. ಡಾ. ಶಿವಪ್ರಸಾದ ತಂತ್ರೀ ನಿರೂಪಿಸಿದರು.
 
 
 
 
 
 
 
 
 

Leave a Reply