Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ~ ಉದ್ಯಮಿ ಭುವನೇಂದ್ರ ಕಿದಿಯೂರ್ 

ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ. ಸುಮಾರು 35 ವರ್ಷಗಳ ಒಡನಾಟ ಛಾಯಾಗ್ರಾಹಕರೊಂದಿಗಿದೆ.  ಫೋಟೋಗ್ರಾಫರ್ಸ್ ಅವರ ನೋವು, ನಲಿವು ಅರ್ಥಮಾಡಿ ಕೊಳ್ಳುವಂತಾಗಿದೆ. ಕರೋನಾ ಮಹಾಮಾರಿಯಿಂದ ಇವರೆಲ್ಲರ ಬಾಳು ತೀವ್ರ ಸಂಕಷ್ಠಕ್ಕೆ ಸಿಲುಕಿರುವುದು ಸತ್ಯ ಎಂದು ಕಿದಿಯೂರು ಹೋಟೆಲ್ ಪ್ರೈವೆಟ್ ಲಿಮಿಟೆಡ್ ಮ್ಯಾನೆಜಿಂಗ್ ಡೈರೆಕ್ಟರ್ ಭುವನೇಂದ್ರ ಕಿದಿಯೂರ್ ಹೇಳಿದರು. 
ಅವರು ಶನಿವಾರದಂದು ಮಾಧವಕೃಷ್ಣ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ಕಾಮತ್ ಫೋಟೋಪ್ರೊ ಮತ್ತು ನಿಖಿತಾ ಡಿಸ್ಟ್ರಿ ಬ್ಯೂಟರ್ಸ್ ಆಯೋಜನೆಯಲ್ಲಿ ಒಂದೇ ಸೂರಿನಡಿ ಫೋಟೋಗ್ರಾಫರ್ ಮತ್ತು ವೀಡಿಯೋ ಗ್ರಾಫರ್ ಬಳಸುವ ಕ್ಯಾಮೆರಾ ಪರಿಕರಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮದ “ಮಿನಿ ಎಕ್ಸ್ಪೋ” ವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು,
ಉಡುಪಿ ವಲಯದವರು ಸಂಘಕ್ಕೊಂದು ಸ್ವಂತ ಸೂರಿನ ಕನಸು ಕಂಡಿದ್ದಾರೆ. ಅದಕ್ಕೆ ಅಗತ್ಯ ಸಹಾಯ ಮಾಡುವುದಾಗಿ ಅವರು ಘೋಷಿಸಿದರು. ಕಾರ್ಯ ಕ್ರಮದಲ್ಲಿ ಕಾಮತ್ ಫೋಟೋಪ್ರೊ  ಮಾಲಕ ನಾಗಾನಂದ ಕಾಮತ್, ನಿಖಿತಾ ಡಿಸ್ಟ್ರಿಬ್ಯೂಟರ್ಸ್ ನ ವಿಶ್ವನಾಥ್ ಹಾರ್ನೆಕರ್, ಎಸ್ಕೆಪಿಎ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್,  ಎಸ್ಕೆಪಿಎ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ್ ರಾವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು. 
ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.   
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!