Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಮಲ್ಪೆ : ಎಸ್ ಐ ಓ ಮಲ್ಪೆ ಶಾಖೆಯ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ಪುನೀತ್ ನಾಯ್ಕ್ ಗೆ ಸನ್ಮಾನ

ಎಸ್ ಎಸ್ ಎಲ್ ಸಿ ಯಲ್ಲಿ ಶೇ 100% 625/625 ಅಂಕ ಪಡೆದ ಮಲ್ಪೆಯ ಪುನೀತ್ ನಾಯ್ಕ್ ರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮಲ್ಪೆ ಘಟಕದ ವತಿಯಿಂದ ಇಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಿರಂತರ ಪರಿಶ್ರಮ ಶ್ರದ್ಧೆ ಆಸಕ್ತಿ ಮತ್ತು ಅಧ್ಯಾಯನದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಪುನೀತ್ ಸಂಘಟಕರಿಗೆ ತಿಳಿಸಿದರು. ಮಲ್ಪೆ ಬಂದರಿನಲ್ಲಿ ಕೆಲಸದ ಜೊತೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಂಕ ಪಡೆದ ಪುನೀತ್ ರವರ ಈ ಸಾಧನೆ ಇತರೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತದೆ ಎಂದು ಎಸ್ ಐ ಓ ಮಲ್ಪೆ ಘಟಕದ ಅಧ್ಯಕ್ಷರಾದ ಶೇಖ್ ಅಯಾನ್ , ಈ ಸಂದರ್ಭದಲ್ಲಿ ಎಸ್ ಐ ಓ ಮಲ್ಪೆ ಘಟಕದ ಕಾರ್ಯದರ್ಶಿಗಳಾದ ನೌಫಲ್ ಅಹಮದ್, ನೌಮನ್ ಕಾರ್ಯಕರ್ತರಾದ ಅಜ್ಮಲ್ ಮತ್ತು ಸಫಾನ್ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!