ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ವಿಶ್ವ ಶ್ರವಣ ದಿನ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ವಿಶ್ವ ಶ್ರವಣ ದಿನದ ಅಂಗವಾಗಿ ವಾಕ್ ಮತ್ತು ಶ್ರವಣ ಆರೈಕೆ ಮತ್ತು ಶ್ರವಣ ದೋಷ ತಡೆಗಟ್ಟುವಿಕೆಗಾಗಿ ಆನ್ಲೈನ್ ಪ್ರಶ್ನಾವಳಿ ಮತ್ತು ದೂರವಾಣಿ ಮೂಲಕ ಉಚಿತವಾಗಿ ಕೇಳುವಿಕೆಯ ಮೌಲ್ಯಮಾಪನ ಮಣಿಪಾಲ 26ನೇ ಫೆಬ್ರುವರಿ 2021: “ವಾಕ್ ಮತ್ತು ಶ್ರವಣದ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತುವಾಕ್ ಮತ್ತು ಶ್ರವಣ ಸಂಸ್ಥೆಗಳು ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನಾಗಿ ಆಚರಿಸುತ್ತೇವೆ.

ಇದರ ಅಂಗವಾಗಿ , ರೋಟರಿ ಕ್ಲಬ್ ಅಂಬಲ್ಪಾಡಿ ಅವರ ಸಹಯೋಗದೊಂದಿಗೆ, 1ನೇ ಮಾರ್ಚ್ 2021 ರಿಂದ 6ನೇ ಮಾರ್ಚ್ 2021ರವರೆಗೆ , ಶ್ರವಣ ಆರೈಕೆ ಮತ್ತು ಶ್ರವಣ ದೋಷ ತಡೆಗಟ್ಟುವಿಕೆಗಾಗಿ ಆನ್ಲೈನ್ ಪ್ರಶ್ನಾವಳಿ ಏರ್ಪಡಿಸಲಾಗಿದೆ ಮತ್ತು ದೂರವಾಣಿ ಮೂಲಕ ಉಚಿತವಾಗಿ ಕೇಳುವಿಕೆಯ ಮೌಲ್ಯಮಾಪನ ಮಾಡಿಕೊಳ್ಳಬಹುದಾಗಿದೆ ”ಎಂದು ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥರಾದ ಡಾ. ಉಷಾ ದೇವದಾಸ್ ಹೇಳಿದರು.

ನಂತರ ಮುಂದಿನ ಪೂರ್ಣ ಪ್ರಮಾಣದ ಮೌಲ್ಯಮಾಪನಕ್ಕಾಗಿ ಹಾಗು ಚಿಕಿತ್ಸೆಗಾಗಿ ಅವಶ್ಯ ವಿರುವವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಅಥವಾ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಭೇಟಿ ನೀಡಬಹುದು. “ ಆರಂಭಿಕ ಹಂತದಲ್ಲಿ ಶ್ರವಣ ತೊಂದರೆಯ ಗುರುತಿಸುವುಕೆ ಮತ್ತು ಅದರ ಚಿಕಿತ್ಸೆಯು ಶ್ರವಣ ತೊಂದರೆ ಇರುವ ವ್ಯಕ್ತಿಗಳಿಗೆ ಜೀವನದ ಗುಣ ಮಟ್ಟವನ್ನು ಕಾಪಾಡಲು ನೆರವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆಯು ಶ್ರವಣ ನಷ್ಟ ಹೊಂದಿರುವ ವ್ಯಕ್ತಿಗಳಲ್ಲಿ ಜೀವನದ ಉತ್ತಮ ಗುಣಮಟ್ಟಕ್ಕೆ ಕಾರಣವಾಗಬಹುದು.

ಈ ಸೇವೆಗಳ ಪ್ರಯೋಜನವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ” ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಹೇಳಿದರು. ದೈನಂದಿನ ಮಾನವನ ಸಂವಹನದಲ್ಲಿ ಶ್ರವಣ ಮತ್ತು ಭಾಷೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ರೀತಿಯ ಅಂಗ ವೈಕಲ್ಯವು ಯಾವಾಗಲೂ ಬಾಹ್ಯವಾಗಿ ಗೋಚರಿಸುವುದಿಲ್ಲ.

ಆದರೂ ಈ ರೀತಿಯ ಅಂಗವೈಕಲ್ಯವು ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಈ ತೊಂದರೆಗಳು ನವಜಾತ ಶಿಶುವಿನಿಂದ ಹಿಡಿದು ವಯೋವೃದ್ದರಲ್ಲಿಯೂ ಕಾಣಬಹುದಾಗಿವೆ. ದೂರವಾಣಿ ಸಮಾಲೋಚನೆಗಾಗಿ ಡಾ.ಟಿ.ಎಂ.ಎ ಪೈ ಆಸ್ಪತ್ರೆ, ಉಡುಪಿ- 0820 2942171, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ- 08202937416 ಗೆ ಕರೆ ಮಾಡಬಹುದು. ಆನ್ಲೈನ್ ಪ್ರಶ್ನಾವಳಿ ಪೂರ್ಣಗೊಳಿಸಲು ಈ ಕೆಳಗಿನ ಲಿಂಕ್ ಅಥವಾ ಕ್ಯು ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.
Screening Kannada Child:

https://forms.gle/EMYfvSMMnrZsE7wV8

Screening Kannada Adult:

https://forms.gle/GHnMHKJtAo79ZKbB9

 
 
 
 
 
 
 
 
 

Leave a Reply