ಶಿರ್ವ- ಇಂಜಿನಿಯರ್ಸ್ ಮತ್ತು ಹಿಂದಿ ದಿನಾಚರಣೆ

ಶಿರ್ವ:- ಅಂದಿನ ಆಧುನಿಕ ಮೈಸೂರು ರಾಜ್ಯದ ಹರಿಕಾರ, ತಾಂತ್ರಿಕ ಹಾಗೂ ಉನ್ನತಶಿಕ್ಷಣದ ಜೊತೆಯಲ್ಲಿ ಸಾಹಿತ್ಯ, ಕೃಷಿ, ನೀರಾವರಿ,ಕೈಗಾರಿಕೆ, ಬ್ಯಾಂಕಿoಗ್, ಉದ್ಯಮ ಮುಂತಾದ ದೂರದೃಷ್ಠಿತ್ವದ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ,ಆದರ್ಶ ಜೀವನಮೌಲ್ಯಗಳನ್ನು ನಿತ್ಯಜೀವನದಲ್ಲಿ ರೂಢಿಸಿಕೊಂಡ ಶ್ರೇಷ್ಠವ್ಯಕ್ತಿತ್ವದ ಇಂಜಿನಿಯರ್ ಸರ್.ಎಂ.ವಿ ಎಂದೇಖ್ಯಾತರಾದ ವಿಶ್ವೇಶ್ವರಯ್ಯರವರ ಚಿಂತನಾಶೀಲ ಬದುಕು ಸಾರ್ವಕಾಲಿಕವಾಗಿ ಪ್ರೇರಣೆ ನೀಡುವ ಅಂತಸತ್ವವನ್ನು ಹೊಂದಿದೆ. ಸರ್.ಎಂ.ವಿರವರು ವಿಶ್ವ ಕಂಡ ಧೀಮಂತ ತಂತ್ರಜ್ಞ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿoಗ್ ವಿಭಾಗದ ಹಿರಿಯ ಸಹಪ್ರಾಧ್ಯಾಪಕ ಡಾ. ಶ್ರೀರಾಮ್ ಮರಾಠೆ ನುಡಿದರು.

   ಅವರು ಶುಕ್ರವಾರ ಬಂಟಕಲ್ಲು ರೋಟರಿ ಭವನದಲ್ಲಿ ಏರ್ಪಡಿಸಿದ “ಇಂಜಿನಿರ‍್ಸ್ ಮತ್ತು ಹಿಂದಿ ದಿನಾಚರಣೆ”ಯ ಸಂಯುಕ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸರ್.ಎಂ.ವಿ.ರವರ ಬದುಕು ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

  ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಪ್ರೊ. ಅನುಪಮಾ ಜೋಗಿ ಮಾತನಾಡಿ ಸೆ.೧೪ ಹಿಂದಿ ದಿನಾಚರಣೆ ಮತ್ತು ಸೆ.೧೫ ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಮಹತ್ವದ ದಿನಗಳಾಗಿದ್ದು, ಅದರ ಆಚರಣೆಯ ಮೂಲಕ ಸ್ಫೂರ್ತಿ ತುಂಬುವ ಕಾರ್ಯ ಶ್ಲಾಘನೀಯ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶೇ.೭೦ ಜನರಿಗೆ ಅರ್ಥವಾಗುವ ಏಕೈಕಭಾಷೆ ಹಿಂದಿ. ಇದು ಬಹುಸಂಖ್ಯಾತರ ಭಾಷೆಯಾಗಿದ್ದು ರಾಷ್ಟçಭಾಷೆಯಾಗಿ ಗುರುತಿಸಲ್ಪಟ್ಟಿದೆ ಎಂದು ತಿಳಿಸಿ ಮೀರಾಬಾಯಿಯವರ ಕವಿತೆ ವಾಚನದ ಮೂಲಕ ಶುಭಾಶಯ ಕೋರಿದರು.

    ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರೋಟರಿ ವಲಯ ಸೇನಾನಿ ಪ್ರೊ.ವಿಘ್ನೇಶ್ ಶೆಣೈ ಮಾತನಾಡಿ ಜಿಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ಡಾ.ಶ್ರೀರಾಮ್ ಮರಾಠೆ ಮತ್ತು ಹಿಂದಿ ಭಾಷಾ ಉಪನ್ಯಾಸಕಿ ಪ್ರೊ.ಅನುಪಮಾ ಜೋಗಿರವರನ್ನು ರೋಟರಿ ವತಿಯಿಂದ ಸನ್ಮಾನಿಸಲಾಯಿತು. 

  ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಡಾ.ವಿಠಲ್ ನಾಯಕ್ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಜೆಸಿಂತಾ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಈವನ್ ಡಿಸೋಜ ನಿರೂಪಿಸಿದರು. ದಂಡಪಾಣಿ ರೊನಾಲ್ಡ್ ಮಾರ್ಕ್ ಡಿಸೋಜ ಸಹಕರಿಸಿದರು. ಕಾರ್ಯದರ್ಶಿ ದಿನೇಶ್ ಕುಲಾಲ್ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply