ಶಿರ್ವ -ಸ್ವಾತಂತ್ರ್ಯ ಹೋರಾಟಗಾರರನ್ನು ಸಂಸ್ಮರಿಸುವ “ಅಮೃತಾಂಜಲಿ” ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಶಿರ್ವ:-ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ, ಪ್ರಾಣವನ್ನೂ ಲೆಕ್ಕಿಸದೆ ನಿಸ್ವಾರ್ಥ ಹೋರಾಟ ಮಾಡಿದ ಸ್ವಾತಂತ್ರö್ಯ ವೀರರ ಆದರ್ಶ ಅನುಕರಣೀಯ. ಬಪ್ಪನಾಡು ಶಂಭು ಶೆಟ್ಟಿಯವರು ಸ್ವಾತಂತ್ರö್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರö್ಯದ ನಂತರ ರೈತಪರ ಕಾರ್ಯಕ್ರಮಗಳಲ್ಲಿ ದೇಶಕ್ಕೆ ಹಾಗೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಿವೃತ್ತ ಶಿಕ್ಷಕ ಹಾಗೂ ಶಂಭು ಶೆಟ್ಟಿರವರ ನಿಕಟವರ್ತಿ 85ರ ಹರೆಯದ ಸಚ್ಚಿದಾನಂದ ಆಚಾರ್ ಶಿರ್ವ ನುಡಿದರು.

ಅವರು ರವಿವಾರ ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಶುಭಾವಸರದಲ್ಲಿ “ಅಮೃತ ಭಾರತಿಗೆ ಕನ್ನಡದ ಆರತಿ” ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ ” ಅಮೃತಾಂಜಲಿ” ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿರ್ವದಲ್ಲಿ ನೆಲೆಸಿದ್ದ ಕೃಷಿ ಕುಟುಂಬ ಮೂಲದ ಬಿ.ಶಂಭು ಶೆಟ್ಟಿ ಶಿರ್ವರವರ ಅತ್ಯಂತ ಸಂಕಷ್ಟದ ದಿನಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ ದೇಶದ ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸುವುದು, ಅವರ ಜೀವನದ ಘಟನೆಗಳನ್ನು ತಿಳಿಸುವುದು ಅತೀ ಅಗತ್ಯವಾಗಿದೆ. ಕಸಾಪ ಕಾಪು ಘಟಕ ಹಮ್ಮಿಕೊಂಡ ಮಾದರಿ ಕಾರ್ಯಕ್ರಮ ಅನುಕರಣೀಯ ಎಂದರು. ಶಿರ್ವ ಕಂದಾಯ ನಿರೀಕ್ಷಕ ವಿಜಯ್, ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಶಂಭು ಶೆಟ್ಟಿರವರ ಮೊಮ್ಮಗಳು ರಂಜಿತಾ ಪ್ರಶಾಂತ್ ಶೆಟ್ಟಿ ಮಾತನಾಡಿದರು. ಶಂಭು ಶೆಟ್ಟಿರವರ ಪುತ್ರಿ ಶ್ರೀಮತಿ ಆಶಾ ರತ್ನಾಕರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಂಭು ಶೆಟ್ಟಿರವರ ಮರಿಮಕ್ಕಳಾದ ಮಿಶಿಕಾ ಪಿ.ಶೆಟ್ಟಿ, ಸಮಿಕಾ ಪಿ.ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಂಜುನಾಥ ಕಾಮತ್ ನಾಡಗೀತೆ ಹಾಡಿದರು. ಸದಸ್ಯರಾದ ಅನಂತ ಮೂಡಿತ್ತಾಯ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಹಿರಿಯರಾದ ಶಿವಾನಂದ ಕಾಮತ್, ಕೆ.ಸುಂದರ ಪ್ರಭು, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ರಿಕ್ಷಾ ಯೂನಿಯನ್ ಅಧ್ಯಕ್ಷ ರಮೇಶ್ ಬಂಗೇರ, ಕಸಾಪ ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸದಸ್ಯರುಗಳಾದ ದೇವದಾಸ್ ಪಾಟ್ಕರ್, ರಮಾಕಾಂತ್ ರಾವ್ ಪಡುಬಿದ್ರಿ, ಯಶೋದಾ ಎಲ್ಲೂರು, ವಿದ್ಯಾ ಅಮ್ಮಣ್ಣಾಯ,ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply