ಶಿರ್ವ ಮಹಿಳಾ ಮಂಡಲದ ವತಿಯಿಂದ ಬಡ ಮಕ್ಕಳಿಗೆ ಬ್ಯಾಗ್ ವಿತರಣೆ

60ವರ್ಷಗಳ ಇತಿಹಾಸವುಳ್ಳ ಶಿರ್ವ ಮಹಿಳಾ ಮಂಡಲದ ವಜ್ರಮಹೋತ್ಸವ ವರ್ಷಾಚರಣೆಯ ತಿಂಗಳ ಕಾರ್ಯಕ್ರಮ ಯೋಜನೆಯಡಿ ಇಂದು ಶಿರ್ವದ ಆಕ್ಷೀಲಿಯಮ್ ನಿವಾಸದ ಬಡ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ವಿತರಣೆ ಮಾಡಲಾಯಿತು.ಬೆಂಗಳೂರಿನ ಸನ್ ಕ್ರಿಯೇಷನ್ಸ್ ಮಾಲೀಕರಾದ ಶ್ರೀ ಪಾಂಡುರಂಗ ನಾಯಕ್ ಅವರು ಕೊಡಮಾಡಿದ ಸ್ಕೂಲ್ ಬ್ಯಾಗ್ ಗಳನ್ನು ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಳೆ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಗೀತಾ ವಾಗ್ಳೆ ಅವರು ವಿದ್ಯಾರ್ಥಿಗಳು ಚೆನ್ನಾಗಿ ಓದುವುದರ ಜೊತೆಗೆ ಒಳ್ಳೆಯ ಸನ್ನಡತೆ ಹಾಗೂ ಸನ್ನಾಗರೀಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು.ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು.ಗೌರವಾಧ್ಯಕ್ಷೆ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರು ಮಾತನಾಡಿ ಎಳವೆಯಲ್ಲೇ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಿದಲ್ಲಿ ಆ ಮಕ್ಕಳು ಮುಂದೆ ಒಳ್ಳೆಯ ಪ್ರಜೆಗಳಾಗಿ ಮೂಡಿಬರುತ್ತಾರೆ ಆ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರು,ಮೇಲ್ವಿಚಾರಕರು ಅತ್ಯುತ್ತಮ ಸೇವಾ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಆರಂಭದಲ್ಲಿ ಸಂಸ್ಥೆಯ ಮಾರ್ಗದರ್ಶಕಿ ಸಿಸ್ಟರ್ ವಂದನಾ ಅವರು ಸಂಸ್ಥೆಯ ಕುರಿತು ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು.ಸಿಸ್ಟರ್ ಜಮ್ಮಾ ಅವರು ಸಾಂದರ್ಭಿಕ ನುಡಿಗಳನ್ನಾಡಿ,ಮಹಿಳಾ ಮಂಡಲದ ಸೇವಾ ಕಾರ್ಯಗಳಿಗಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.ನಿವಾಸದ ವಿದ್ಯಾರ್ಥಿನಿಯರು ನೃತ್ಯ ಮಾಡಿ, ಹಾಡುಗಳನ್ನು ಹಾಡುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.ಮಹಿಳಾ ಮಂಡಲದ ಕಾರ್ಯದರ್ಶಿ ಡಾ.ಸ್ಪೂರ್ತಿ ಪಿ ಶೆಟ್ಟಿ ಅವರು ಧನ್ಯವಾದವಿತ್ತರು.ಮಹಿಳಾಮಂಡಲದ ಶ್ರೀಮತಿ ಐರಿನ್ ಲುಸ್ರಾದೋ ಹಾಗೂ ಶ್ರೀಮತಿ ಮಾಲತಿ ಮುಡಿತ್ತಾಯ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಕೋಶಾಧಿಕಾರಿ ಶ್ರೀಮತಿ ಮಾರಿಯಾ ಜೆಸಿಂತಾ ಫುರ್ಟಾಡೋ, ಶ್ರೀಮತಿ ವನಿತಾ ನಾಯಕ್, ಪ್ರಫುಲ್ಲ ಶೆಟ್ಟಿ, ಪುಷ್ಪಾ ಆಚಾರ್ಯ, ಸುನೀತಾ ಸದಾನಂದ್,ದೀಪಾ ಶೆಟ್ಟಿ,ಆಫ್ರಿನ್ ಬಾನು,ಲೀನಾ ನೊರೋನ್ಹ, ಸುನೀತಾ ಕ್ವಾರ್ಡ, ಮತ್ತು ನಿವಾಸದ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply