ಶಿರ್ವ ವಿದ್ಯಾವರ್ಧಕ ಸಂಘದ ಕ್ಯಾಂಪಸ್‌ನಲ್ಲಿ ನಿಟ್ಟೆ ವಿವಿ ೨೩ನೇ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ

ಶಿರ್ವ:- :ಶಿರ್ವ ವಿದ್ಯಾವರ್ಧಕ ಸಂಘದ ಕ್ಯಾಂಪಸ್‌ನಲ್ಲಿ ಆರಂಭಗೊಳ್ಳಲಿರುವ ನಿಟ್ಟಿ ವಿವಿಯ ೨೩ನೇ ಗ್ರಾಮೀಣ ಆರೋಗ್ಯ ಕೇಂದ್ರ (ಸೆಟ್‌ಲೈಟ್ ಹೆಲ್ತ್ ಸೆಂಟರ್)ದ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.

ನಿಟ್ಟೆ ವಿವಿಯ ಕುಲಾಧಿಪತಿ ಎನ್ ವಿನಯ ಹೆಗ್ಡೆ ಇವರ ಉಪಸ್ಥಿತಿಯಲ್ಲಿ ನಿಟ್ಟೆ ವಿವಿಯ ಕುಲಪತಿ ಡಾ. ಸತೀಶ್ ಭಂಡಾರಿ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಾ, ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಈ ಆರೋಗ್ಯ ಕೇಂದ್ರವು ಗುಣಮಟ್ಟದ ಮೆಡಿಸಿನ್ ವಿಭಾಗ ಹಾಗೂ ಹಲ್ಲಿನ ವಿಭಾಗಗಳನ್ನು ಒಳಗೊಳ್ಳಲಿದೆ. ಈಗಾಗಲೇ ಇರುವ ವಿವಿಯ ಆರೋಗ್ಯ ಕೇಂದ್ರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನರ ಮೆಚ್ಚುಗೆ ಪಡೆದಿದ್ದು ಆ ಪರಂಪರೆ ಇಲ್ಲೂ ಮುಂದುವರಿಯುವ ವಿಶ್ವಾಸವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಆರ್ ಪಾಟ್ಕರ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಲ್ಲಿ ಅತ್ಯಂತ ಉಪಯುಕ್ತವಾದ ಆರೋಗ್ಯ ಕೇಂದ್ರದ ಸ್ಥಾಪನೆಗೆ ಪಂಚಾಯತ್ ವತಿಯಿಂದ ಸರ್ವ ಸಹಕಾರ ನೀಡಲು ಬದ್ದನಿದ್ದೇನೆ ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ. ಸುಬ್ಬಯ್ಯ ಹೆಗ್ಡೆ, ಪದಾಧಿಕಾರಿಗಳಾದ ಶ್ರೀನಾಥ್ ಹೆಗ್ಡೆ, ಜಗದೀಶ್ ಅರಸ್, ಅಂಬಾಡಿಬೀಡು ಡಾ| ರವೀಂದ್ರನಾಥ್ ಶೆಟ್ಟಿ, ಶಿರ್ವ ಎಮ್‌ಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ. ನಯನಾ ಎಂ ಪಕ್ಕಳ, ಹಿಂದು ಪಿಯು ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಎ, ಹಿಂದೂ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ, ವಿದ್ಯಾವರ್ಧಕ ಆಂಗ್ಲಮಾಧ್ಯಮ ಶಾಲಾ ಪ್ರಾಂಶುಪಾಲೆ ನಿಶಾ ಶೆಟ್ಟಿ, ನಿಟ್ಟೆ ವಿವಿಯ ರಿಜಿಸ್ಟಾರ್ ಯೋಗೀಶ್ ಹೆಗ್ಡೆ, ರೆಸಿಡೆಂಟ್ ಇಂಜಿನಿಯರ್ ಶ್ರೀನಾಥ್ ಶೆಟ್ಟಿ, ಆರ್ಕಿಟೆಕ್ಟ್ ಶರತ್ ಪೂಂಜಾ, ನಿಟ್ಟೆ ಇಂಜಿನಿಯರಿAಗ್ ಕಾಲೇಜಿನ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಶ್ರೀನಿವಾಸ್ ರಾವ್, ಹಿಂದೂ ಪಿಯು ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ವಿದ್ಯಾವರ್ಧಕ ಶಿಕ್ಷಣಸಂಸ್ಥೆಗಳ ಹಾಲಿ ಮತ್ತು ನಿವೃತ್ತ ಶಿಕ್ಷಕರು ಸಿಬಂದಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ವೈದಿಕರಾದ ವೇದಮೂರ್ತಿ ಶ್ರೀನಿವಾಸ್ ಭಟ್ ಶಿರ್ವ ಇವರು ಧಾರ್ಮಿಕ ಅನುಷ್ಢಾನಗಳನ್ನು ನೆರವೇರಿಸಿದರು.
ಶಿರ್ವ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನ ಸ್ಥಳೀಯ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೋ. ವೈ ಭಾಸ್ಕರ್ ಶೆಟ್ಟಿ ವಂದಿಸಿದರು. ಶಿರ್ವ ಎಮ್‌ಎಸ್‌ಆರ್‌ಎಸ್ ಕಾಲೇಜಿನ ಉಪಪ್ರಾಂಶುಪಾಲ ಮಂಜುನಾಥ್ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply