ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ,ಮಗುವಿನ ಆರೋಗ್ಯ ವೃದ್ದಿ -ಡಾ. ಗಾಯತ್ರಿಸಂತೋಷ್

ಶಿರ್ವ:-ಸೊಪ್ಪುತರಕಾರಿಗಳು, ಮೊಳಕೆಬರಿಸಿದ ಕಾಳುಗಳು, ಹಾಲು, ಹಾಲಿನ ಉತ್ಪನ್ನಗಳು,ಮೊಟ್ಟೆಯಲ್ಲಿ ಅಧಿಕ ಪೋಷಕಾಂಶಗಳಿದ್ದು, ಇದರ ಕ್ರಮಬದ್ದ ಸೇವನೆ ಅಗತ್ಯ. ಕೊಬ್ಬರಿಎಣ್ಣೆ ಅತ್ಯಂತ ಉತ್ತಮ ಕೊಬ್ಬಿನಾಂಶ ನೀಡುವ ಪದಾರ್ಥವಾಗಿದೆ. ಪೋಷಕಾಂಶಯುಕ್ತ ಆಹಾರಸೇವನೆಯಿಂದ ತಾಯಿ ಮಗುವಿನ ಆರೋಗ್ಯವೃದ್ಧಿಯಾಗುತ್ತದೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ.ಗಾಯತ್ರಿ ಸಂತೋಷ್ ನುಡಿದರು.
ಅವರು ಗುರುವಾರ ಪಡುಬೆಳ್ಳೆ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಗ್ರಾಮ ಪಂಚಾಯತ್ ಮೂಡುಬೆಳ್ಳೆ ವಾರ್ಡ್ 4 ಮತ್ತು 5″ಪೋಷಣ್ ಅಭಿಯಾನ” ಮಾಸಾಚರಣೆಯ ಪ್ರಯುಕ್ತ ಏರ್ಪಡಿಸಿದ ಕಾರ್ಯ ಕ್ರಮದಲ್ಲಿ ಮಹಿಳೆಯರಿಗೆ ಆರೋಗ್ಯ  ಹಾಗೂ ಕೋವಿಡ್ ಲಸಿಕಾ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಜ್ಯೋತಿಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಹಿರಿಯರು ಶ್ರಮದಾಯಕ ಕೆಲಸದ ಜೊತೆಗೆ ಕಾಲಕಾಲಕ್ಕೆ ಬೆಳೆಯುವ ಪ್ರಕೃತಿದತ್ತಆಹಾರ ಸೇವಿಸಿ ಆರೋಗ್ಯಪೂರ್ಣ ಜೇವನವನ್ನು ನಡೆಸಿ ಧೀರ್ಘಾಯುಷಿಗಳಾಗಿ ಬಾಳಿದರು. ಫಾಸ್ಟ್ ಫುಡ್, ಆಧುನಿಕ ಆಹಾರ ಶೈಲಿಯ ಆಹಾರ ಸೇವನೆ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ವಹಿಸಿ ಮಾತನಾಡುತ್ತಾ ನರೇಗಾ ಯೋಜನೆಯ ಮೂಲಕ ಮನೆಗಳಲ್ಲಿ ತರಕಾರಿ ಬೆಳೆಯಲು ಅವಕಾಶವಿದ್ದು ಪ್ರಯೋಜನ ಪಡೆದು ಕೊಳ್ಳು ವಂತೆ ವಿನಂತಿಸಿದರಲ್ಲದೆ, ಗ್ರಾಮದಲ್ಲಿ 95 ಶೇಕಡ ಕೋವಿಡ್ ಲಸಿಕೆ ಪ್ರಗತಿಯಲ್ಲಿದ್ದು, ಪ್ರತೀಯೊಬ್ಬರೂ ಕೋವಿಡ್ ಲಸಿಕೆ ಪಡೆದು ನೂರು ಶೇಕಡ ಸಾಧನೆಗೆ ಸಹಕರಿಸುವಂತೆ ಕರೆಯಿತ್ತರು.  ವಾರ್ಡ್ ಸದಸ್ಯರಾದ ಶಶಿಧರ ವಾಗ್ಲೆ, ಹರೀಶ್ ಶೆಟ್ಟಿ ಕಕ್ರಮನೆ, ಪ್ರೇಮಾವೆಂಕಟೇಶ್, ಸಂತೋಷ್ ಕುಲಾಲ್ ಮಾತನಾಡಿದರು.

 
ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತಕ್ರಮ ನೆರವೇರಿಸಲಾಯಿತು. ಅಪೌಷ್ಠಿಕತೆ ಇರುವ ಮಕ್ಕಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರಾದ ಶಕುಂತಳಾ ಆಚಾರ್ಯ, ದಿವ್ಯಾ, ಯಶೋದಾ, ಸ್ತ್ರೀಶಕ್ತಿಗುಂಪುಗಳು, ಮಹಿಳೆಯರು ಅದಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು
.
ಪಿಡಿಒ ವಸಂತಿ ಬಾಯಿ  ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ  ಶೈಲಾ ಪ್ರಾಸ್ತಾವಿಕ ಮಾತು ಗಳೊಂದಿಗೆ ನಿರೂಪಿಸಿದರು. ಮಾನಸ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಆರ್ ಪೂಜಾರಿ ಪ್ರಾರ್ಥಿಸಿದರು. ಪಡುಬೆಳ್ಳೆ ಅಂಗನವಾಡಿ ಶಿಕ್ಷಕಿ ಜಯಶ್ರೀ ಆಚಾರ್ಯ ಧನ್ಯವಾದವಿತ್ತರು
 
 
 
 
 
 
 
 
 
 
 

Leave a Reply