ಗುರುಗುಹ ಗಾಯನ ಅಭಿಯಾನ

ಶಿವಮೊಗ್ಗದಲ್ಲಿ ವಿದ್ವಾನ್ ಶೃಂಗೇರಿ ಹೆಚ್ ಎಸ್ ನಾಗರಾಜ್  ಅವರ ಸಾರಥ್ಯದಲ್ಲಿ 1985 ರಿಂದಲೂ ಚಾಲ್ತಿಯಲ್ಲಿರುವ ಪುರಂದರ ದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ನಡೆಸುವ ಪುರಂದರ ದಾಸರ ಪದಗಳ ಉಚಿತ ಗಾಯನ ಅಭಿಯಾನವು ಇದೀಗ ಆನ್ಲೈನ್ ರೂಪಕ್ಕೆ ಬಂದಿದೆ. ಈ ಅಭಿಯಾನವು ವಿಶೇಷವಾಗಿ ಮಹಿಳೆಯರಿಗೆಂದೇ ಮೀಸಲಾಗಿದ್ದು, 15 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು. ತರಗತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಅವಶ್ಯಕತೆ ಇಲ್ಲ ಎಂಬುದು ಈ ಅಭಿಯಾನದ ವಿಶೇಷ.

ವೃತ್ತಿನಿರತ ಮತ್ತು ಗೃಹಿಣಿಯರೂ ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಆಗಸ್ಟ್ ತಿಂಗಳ ೦೭ ನೇ ತಾರೀಖಿನಿಂದ ಈ ಅಭಿಯಾನ ಪ್ರಾರಂಭವಾಗಲಿದ್ದು, ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ಇರಲಿವೆ. ಪ್ರತಿ ಭಾನುವಾರವೂ ಸಮಯಾನುಸಾರವಾಗಿ ಐದು ಪ್ರತ್ಯೇಕ ಆನ್ಲೈನ್ ತರಗತಿಗಳು ಇರಲಿವೆ. ಅಂತೆಯೇ ಅನುಕೂಲ ಇದ್ದವರು ಆಫ್ಲೈನ್ ತರಗತಿಗಳಲ್ಲೂ ಪಾಲ್ಗೊಳ್ಳಬಹುದು. ವಿಶೇಷವಾಗಿ ಆಫ್ಲೈನ್ ತರಗತಿಗಳನ್ನು “ಧಾರ್ಮಿಕ ಪ್ರವಾಸ” ದ ರೀತಿಯಲ್ಲಿ ಇರಲಿದ್ದು, ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ದೇಗುಲಗಳಲ್ಲಿ ನಡೆಸಲಾಗುವುದು. ಈ ಅಭಿಯಾನ ಉಚಿತವಾಗಿರಲಿದ್ದು ಆಫ್ಲೈನ್ ತರಗತಿಗಳಲ್ಲಿ ಭಾಗವಹಿಸುವವರು ಪ್ರಯಾಣದ ಭತ್ಯೆಯನ್ನು ತಾವೇ ಭರಿಸಬೇಕಾಗುತ್ತದೆ.

ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಗಾಯಕಿಯರಿಗೆ ಆನ್ಲೈನ್ ಅರ್ಜಿಯನ್ನು ಭರಿಸುವುದು ಕಡ್ಡಾಯ. ಆಗಸ್ಟ್ ೦೧ ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಗಾಯಕಿಯರು ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿಯೇ ಅರ್ಜಿ ತುಂಬಿ ಸಲ್ಲಿಸಬಹುದು.

ಗುರುಗಹ ಗಾಯನ ಅಭಿಯಾನದಲ್ಲಿ ಪಾಲ್ಗೊಳ್ಳಿ. ಪುರಂದರ ದಾಸರ ಕೀರ್ತನೆ ಕಲಿತು ದೈವ ಕೃಪೆಗೆ ಪಾತ್ರರಾಗಿ 

ವೆಬ್ಸೈಟ್ : www.bhakhisankeerthana.com

 
 
 
 
 
 
 
 
 

Leave a Reply