ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದಿಂದ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಮನವಿ. 

ಉಡುಪಿ: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಪದಾಧಿಕಾರಿಗಳು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಬಳಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಅವರು ಮಾತನಾಡಿ, ಸರಕಾರವು ಖಾಸಗಿ ಶಿಕ್ಷಕರಿಗೆ ಪರಿಹಾರ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ, ಆದರೆ ಇದುವರೆಗೆ e ಬಗ್ಗೆ ಯಾವುದೇ ಅಧಿಕೃತವಾಗಿ ತಿಳಿಸಿಲ್ಲ.

ಶಿಕ್ಷಕರು ಕಳೆದ 9 ತಿಂಗಳಿಂದ ವೇತನ ಇಲ್ಲದೆ ಕಷ್ಟದಲ್ಲಿ ಇದ್ದರೆ ಎಂದು ಹೇಳಿದರು. ನಂತರ ಮಾತನಾಡಿದ ಮಹೇಶ್ ಹೈಕಾಡಿ ಅವರು ಶಿಕ್ಷಕರಿಗೆ ಸರಕಾರ ತಿಳಿಸಿದ ಮೂಲ ವೇತನ ಮತ್ತು ಉದ್ಯೋಗ ಭದ್ರತೆ ಸೌಲಭ್ಯ ದೊರಕಬೇಕು ಎಂದು ಹೇಳಿದರು.

ಮನವಿಗೆ ಸ್ಪಂದಿಸಿದ ಸಭಾಪತಿ ಅವರು ನಿಮ್ಮ ವಿಚಾರಗಳನ್ನು ಸಭೆಯಲ್ಲಿ ಮಂಡಿಸುವುದು ಮಾತ್ರವಲ್ಲದೆ ಸರಕಾರದ ಕಾರ್ಯದರ್ಶಿ ಅವರಿಂದ ನ್ಯಾಯ ದೊರಕಿಸುವುದು ನನ್ನ ಕೆಲಸ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಂದಾಪುರ ಘಟಕದ ಪದಾಧಿಕಾರಿಗಳಾದ ಪ್ರದೀಪ್ ಹಾಲಾಡಿ, ರವೀಂದ್ರ ಬೈಲೂರು, ಚಿದಾನಂದ ಸಿದ್ದಾಪುರ, ಕಮಲಾ ಹಾಲಾಡಿ, ಸುಬ್ರಹ್ಮಣ್ಯ ಭಟ್ ಬಸ್ರೂರು, ಧನ್ ರಾಜ್ ಬಸ್ರೂರು, ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

1 COMMENT

  1. Let the teachers of unaided schools and colleges get justice for their selfless service and hardwork. They taught the children about fundamental rights and duties but forgot how to use theirown rights. Their softcorner about the management made them as beggers today.

Leave a Reply