ಶಾರೀಕ್ ಗುರುತನ್ನು ದೃಢಪಡಿಸಿದ ಸಂಬಂಧಿಕರು

ರಾಜ್ಯದ ಕರಾವಳಿ ನಗರ ಮಂಗಳೂರಿನ ಸ್ಫೋಟದ ಶಂಕಿತ ಆರೋಪಿ ಶಾರೀಕ್ ಗುರುತನ್ನು ಆತನ ಕುಟುಂಬದ ಸಂಬಂಧಿಕರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯಿಂದ ಬಂದಿದ್ದ ಶಾರೀಕ್ ಚಿಕ್ಕಮ್ಮ ಮತ್ತು ಸಹೋದರಿ ಶಾರೀಕ್ ಗುರುತು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಈ ಸಂಬಂಧ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ

ಇದೇ ವೇಳೆ ಶಾರೀಕ್ ಕುಕ್ಕರ್ ಕೈಯಲ್ಲಿ ಹಿಡಿದು ಫೋಟೋಕ್ಕೆ ಫೋಸ್ ಕೊಟ್ಟಿರುವ ಚಿತ್ರ ವೈರಲ್ ಆಗಿದೆ.

ಐಸಿಎಸ್ ಚಟುವಟಿಕೆಯಿಂದ ಶಾರೀಕ್ ಪ್ರಭಾವಿತನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮೈಸೂರಿನಲ್ಲಿ ಶಾರೀಕ್ ಗೆ ಬಾಡಿಗೆಗೆ ಮನೆ ನೀಡಿದ್ದ ಮಾಲಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 
 
 
 
 
 
 

Leave a Reply