ಶಂಕರನಾರಾಯಣ: ಭ್ರಷ್ಟಾಚಾರದ ವಿರುದ್ಧ ಜಾಗ್ರತಿ ಕಾರ್ಯಕ್ರಮ

ಉಡುಪಿ ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸೃತ ಸಮೃದ್ಧಿ ಯುವಕ ಮಂಡಲ (ರಿ)ಕುಳಂಜೆ,ಶಂಕರನಾರಾಯಣ ಇದರ ಜಾಗ್ರತಿ ಅರಿವು ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ದ ವಿರುದ್ಧ ಜಾಗ್ರತಿ ಕಾರ್ಯಕ್ರಮವನ್ನು 05.11.22 ಶನಿವಾರ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ಇಲ್ಲಿ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ಚಿಟ್ಟೆ ರಾಜಗೋಪಾಲ ಹೆಗ್ಡೆ ಭಾಗವಹಿಸಿ ಭ್ರಷ್ಟಾಚಾರ ಅಂದರೆ ಏನು,ಅದರ ತಡೆ ಕಾಯ್ದೆ,ಕಾರಣಗಳು,ವಿಧಗಳು, ಅದನ್ನು ಹೆಚ್ಚಾಗಿ ಯಾರು ಮಾಡುತ್ತಾರೆ ಎಂಬ ಕುರಿತು ಮಾತನಾಡಿದರು.ಇಂದಿನ ರಾಜಕಾರಣಿಗಳು ನಮ್ಮ ಪ್ರಧಾನಿ ನರೇಂದ್ರ ಮೋದಿಯವರರು ಹೇಳಿರುವಂತೆ ತಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂಬ ದೊರಣೆಯನ್ನು ಪಡೆಯಬೇಕು , ನಮ್ಮ ದೇಶದ ಚುನಾವಣಾ ವ್ಯವಸ್ಥೆ ಇನ್ನೂ ಸುದಾರಿಸಬೇಕು, ಉತ್ತಮ ಅಭ್ಯರ್ಥಿ ಗಳನ್ನೇ ಆಯ್ಕೆಮಾಡಬೇಕು,ಜನರ ಕೈಯಲ್ಲಿ ಚಲಾವಣೆಗೆ ಹಣವಿರಬಾರದು ಎಲ್ಲವೂ ಡಿಜಿಟಲ್ ರೂಪದಲ್ಲಿ ಹಣದ ಮೌಲ್ಯ ವರ್ಗಾವಣೆ ಯಾದರೆ ಭಾರತದಲ್ಲಿ ಭ್ರಷ್ಟಾಚಾರ ವನ್ನು ತಕ್ಕಮಟ್ಟಿಗೆ ತಡೆಯಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಮೃದ್ಧಿ ಯುವಕ ಮಂಡಲ (ರಿ) ಕುಳಂಜೆ ಇದರ ಅಧ್ಯಕ್ಷ ರಾದ ಯೋಗೀಶ್ ದೇವಾಡಿಗ ವಹಿಸಿಕೊಂಡು ಪ್ರಾಸ್ತಾವಿಕ ಮಾತನಾಡಿದರು.ವಸತಿ ಶಾಲಾ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ,ಯುವಕಮಂಡಲ ಕಾರ್ಯದರ್ಶಿ ಸಂದೀಪ ನಾಯ್ಕ ಏಳಜೆಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಯ ಪ್ರವೀಣ ನಾಯ್ಕ ಬಾಳೇಕೋಡ್ಲು ಪ್ರತಿಜ್ಞಾ ವಾಚನ ಬೋಧಿಸಿದರು. ಉಪಾಧ್ಯಕ್ಷ ನಾರಾಯಣ .ಟಿ. ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ವಸತಿ ಶಾಲಾ ಶಿಕ್ಷಕರು ,ವಿದ್ಯಾರ್ಥಿಗಳು, ಯುವಕ ಮಂಡಲ ಸದಸ್ಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.

 
 
 
 
 
 
 

Leave a Reply