Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ಗ್ರಹಿಣಿಯ ಪ್ರಾಣ ಕಸಿದ ಸೆಲ್ಫಿ

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಫಿ ತೆಗೆಯಲು ಮುಂದಾಗಿ ಗೃಹಿಣಿ ನೀರುಪಾಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ನಂಜನಗೂಡು ತಾಲ್ಲೂಕಿನ ಪವಿತ್ರ ಯಾತ್ರಾ ಶ್ರೀ ಕ್ಷೇತ್ರ ಸಂಗಮದ ಕಪಿಲಾ ನದಿಯಲ್ಲಿ ಈ ದುರ್ಘಟನೆ ಜರುಗಿದೆ.

ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ 38 ವರ್ಷದ ಮೃತ ಗೃಹಿಣಿಗಾಗಿದ್ದಾರೆ.

ಮೈಸೂರು ತಾಲ್ಲೂಕಿನ ದೂರ ಗ್ರಾಮದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾದ ಡಿ ಬಿ ನಾಗರಾಜ್ ಎಂಬುವರ ಪುತ್ರಿ ಮೃತ ಗೃಹಿಣಿ ಕವಿತಾ.

ಮೃತ ಗೃಹಿಣಿ ಕವಿತಾ ಮತ್ತು ಪತಿ ಗಿರೀಶ್ ಹಾಗೂ ಪುತ್ರಿಯ ಜತೆಗೂಡಿ ಯಾತ್ರಾಸ್ಥಳ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ.

ದೇವಾಲಯದ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲೇ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ತೆರಳಿದ್ದಾರೆ

ಕಾಲು ತೊಳೆದು ನೀರು ಸೇವಿಸಿದ ಬಳಿಕ ಮೊಬೈಲ್ ಪೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ

ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯುತ್ತಿದ್ದ ಕವಿತಾ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ
ಮೃತ ಯುವತಿಯ ಶವವನ್ನು ಕಪಿಲಾ ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!