Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಸಂಭಾಷಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಯುರ್ವೇದ ಸಂಹಿತಾ ಸಿದ್ದಾಂತ ವಿಭಾಗವು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಹತ್ತು ದಿನಗಳ ಸಂಸ್ಕೃತ  ಸಂಭಾಷಾ ಶಿಬಿರದ ಉದ್ಘಾಟನಾ ಸಮಾರಂಭವು​ಮಂಗಳವಾರ ನೆರವೇರಿತು. 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸ್ನಾತಕೋತ್ತರ ವಿಭಾಗಾಧ್ಯಕ್ಷಾರಾದ ಡಾ. ನಿರಂಜನ್ ರಾವ್ ವಹಿಸಿ ಆಯುರ್ವೇದಕ್ಕೆ ​ಸಂಸ್ಕೃತ ಭಾಷೆಯ ಅಗತ್ಯವನ್ನು ಪ್ರತಿಪಾದಿಸಿದರು. ಸ್ನಾತಕೋತ್ತರ ವಿಭಾಗದ ಉಪಾಧ್ಯಕ್ಷರಾದ ಡಾ. ನಾಗರಾಜ್ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಎಲ್ಲರೂ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 
 
ಸಂಹಿತಾ ಸಿದ್ದಾಂತ ವಿಭಾಗಾಧ್ಯಕ್ಷರಾದ ಡಾ. ಶ್ರೀಕಾಂತ್ ಪಿ.ಹೆಚ್ ಎಲ್ಲರನ್ನೂ ಸ್ವಾಗತಿಸಿದರು.  ಸಂಸ್ಕೃತ   ಸಹ ಪ್ರಾಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಪಿ ಶುಭಾಶಯ ಕೋರಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಲಿಖಿತಾ ಡಿ.ಎನ್ ವಂದನಾರ್ಪಣೆ ನೆರವೇರಿಸಿದರು. ಡಾ. ಸೌಮ್ಯ ಅಶೋಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಹಿತಾ ಸಿದ್ಧಾಂತ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಿದ್ಯಾ​ಲಕ್ಷ್ಮೀ  ​ ಕೆ. ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳಾದ  ಸಂಸ್ಕೃತ   ಭಾರತಿಯ ಶ್ರೀಮತಿ ಶಕುಂತಲಾ ಶೆಣೈ, ಶ್ರೀಮತಿ ವನಿತಾ ಉಪಸ್ಥಿತರಿದ್ದರು.  ಶಿಬಿರವು ಜನವರಿ ​16ರವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು  ಸಂಸ್ಕೃತ    ಸಂಭಾಷಣೆ ಅಧ್ಯಯನದಲ್ಲಿ ತರಬೇತಿ ಪಡೆಯಲಿದ್ದಾರೆ. ​​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!