Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಸ್ವಚ್ಛ ಸಾಗರ ಅಭಿಯಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಸಾಗರ ದಿನದ ಅಂಗವಾಗಿ ಕಡೆಕಾರು ಗ್ರಾಮ ಪಂಚಾಯತು ಹಾಗೂ ಟೀಮ್ ನೇಷನ್ ಫಸ್ಟ್ (ರಿ) ಸಹಯೋಗದೊಂದಿಗೆ ಪಡುಕರೆ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೂವತ್ತು ಎನ್ನೆಸ್ಸೆಸ್ ಸ್ವಯಂಸೇವಕರು, 25 ಮಂದಿ ಟೀಮ್ ನೇಷನ್ ಫಸ್ಟ್ನ ಸದಸ್ಯರು ಹಾಗೂ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು. ಸುಮಾರು 200 ಕಿ.ಗ್ರಾಂನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು. ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾಮ ಪಂಚಾಯತಿನ ತ್ಯಾಜ್ಯ ನಿರ್ವಹಣಾ ವಾಹನದ ಮೂಲಕ ಸಾಗಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ., ಸಹಯೋಜನಾಧಿಕಾರಿಗಳಾದ ಡಾ. ಯೋಗೀಶ್ ಆಚಾರ್ಯ, ಡಾ. ಶ್ರೀನಿಧಿ ಧನ್ಯ, ಡಾ. ಮಹಾಲಕ್ಷ್ಮೀ ಎಮ್.ಎಸ್, ಗ್ರಾಮ ಪಂಚಾಯತ್ ಪಿ.ಡಿ.ಓ ಶ್ರೀ ಸಿದ್ಧೇಶ್, ಉಪಾಧ್ಯಕ್ಷ ಶ್ರೀ ನವೀನ್ ಶೆಟ್ಟಿ, ಸದಸ್ಯ ಶ್ರೀ ವಸಂತ ಕುಂದರ್, ಟೀಮ್ ನೇಷನ್ ಫಸ್ಟ್ನ ಅಧ್ಯಕ್ಷರಾದ ಶ್ರೀ ಸೂರಜ್, ಡಾ. ಅತುಲ್ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!