ಎಸ್‌ಡಿಎಂ ಫಾರ್ಮಸಿ ಜಿ.ಎಮ್ ಡಾ. ಮುರಳೀಧರ ಬಲ್ಲಾಳ್ ಅಂತರಾಷ್ಟ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ

ಭಾರತದಲ್ಲಿ ಆಯುರ್ವೇದ ಚಿಕಿತ್ಸಾ ಪ್ರಕಾರವಾದ ವಾತಾತಪೀಕ (ದೈನಂದಿನ ಜೀವನದಲ್ಲಿ ರಸಾಯನ ಚಿಕಿತ್ಸೆ) ಇದರ ಬಗ್ಗೆ ಇತ್ತೀಚಿನ ಅನ್ವೇಷಣೆ ಮತ್ತ ಪ್ರಗತಿಯ ಬಗ್ಗೆ ಯುರೋಪಿನ ಕ್ರೋವೆಷೀಯ ದೇಶದ ಝಾಗ್‌ರೆಬ್‌ನಲ್ಲಿ ಇದೇ ಜುಲೈ ೦೯ ರಿಂದ ೨೦ರ ವರೆಗೆ ರಸಾಯನ ಸಂಸ್ಥೆ ಮತ್ತು ಸನ್ಯಾಸಿ ಸಂಸ್ಥೆಗಳು ಆಯ್ದ ದೇಶಗಳ ವೈದ್ಯರಿಗೆ ಹೃವಾತ್ಸಕ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಕ್ಷೇತ್ರದ ವಿಶೇಷ ಆಹ್ವಾನಿತ ಪ್ರಮುಖ ತಜ್ಞರಾಗಿ ಡಾ. ಮುರಳೀಧರ ಬಲ್ಲಾಳ್ ಭಾಗವಹಿಸಿದ್ದಾರೆ.

ವಾತಾತಪೀಕ ರಸಾಯನ ಚಿಕಿತ್ಸೆಯನ್ನು ಕೇಂದ್ರೀಕರಿಸಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಎಸ್‌ಡಿಎಮ್ ಪಾರ್ಮಸಿ ಉಡುಪಿ ಈಗಾಗಲೇ ಹಲವಾರು ರಸಾಯನ ಚಿಕಿತ್ಸಾ ಔಷಧಿಗಳನ್ನು ತಯಾರಿಸುತ್ತಿದ್ದು ಇದರ ಚಿಕಿತ್ಸೆ ಮತ್ತು ಪ್ರಾತ್ಯಕ್ಷಿಕೆಯ ಬಗ್ಗೆ ಇವರು ವಿವರ ನೀಡಲಿದ್ದಾರೆ.

 
 
 
 
 
 
 
 
 
 
 

Leave a Reply