ಸರಸ್ವತಿ ವಿದ್ಯಾಲಯದಲ್ಲಿ ಕಿಂಡರ್ ಪ್ಲೇ ಗಾರ್ಡನ್ ಉದ್ಘಾಟನೆ

ಗಂಗೊಳ್ಳಿಯ  ಸರಸ್ವತಿ ವಿದ್ಯಾಲಯದ ಆವರಣದಲ್ಲಿ  ಹೊಸದಾಗಿ ನಿರ್ಮಿಸಲಾದ ಕಿಂಡರ್ ಪ್ಲೇ ಗಾರ್ಡನ್ ನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಉದ್ಯಮಿ ಆನಂದ ಸಿ ಕುಂದರ್  ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾ ಸಂಸ್ಥೆ ಒದಗಿಸುವ ಇಂತಹ ಸೌಲಭ್ಯಗಳು ಮಕ್ಕಳಲ್ಲಿ ಉತ್ಸಾಹ ವನ್ನು ಹೆಚ್ಚಿಸುತ್ತದೆ. ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ  ಪ್ರೇರಣೆಯನ್ನು ನೀಡುತ್ತವೆ ಎಂದು ಹೇಳಿದರು. ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಎಸ್ ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸದಸ್ಯರಾದ,  ರಾಮನಾಥ ನಾಯಕ್ ಅಶ್ವಿನ್ ನಾಯಕ್, ನಾಗೇಂದ್ರ ಪೈ, ಗೋವಿಂದರಾಯ ಆಚಾರ್ಯ, ಚಿನ್ಮಯಿ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಉಮೇಶ್ ಪುತ್ರನ್, ಸುಮ ಪುತ್ರನ್, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ, ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಾಂಶುಪಾಲ ಉಮೇಶ್ ಕರಣಿಕ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು.    ಇದೇ ಸಂದರ್ಭದಲ್ಲಿ ಆನಂದ ಸಿ ಕುಂದರ್ ಕಿಂಡರ್ ಪ್ಲೇ ಗಾರ್ಟನ್ ನಿರ್ಮಾಣದ ಪ್ರಯುಕ್ತ ನಗದು ಸಹಾಯ ರೂಪದಲ್ಲಿ ಐದು ಲಕ್ಷ ರೂಪಾಯಿಗಳನ್ನು ಜಿ.ಎಸ್.ವಿ.ಎಸ್ ಅಸೋಷಿಯೇಷನ್‌ಗೆ ದೇಣಿಗೆ ನೀಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply