ನಿರಂತರ ಆರೋಗ್ಯ ತಪಾಸಣೆ ಅತ್ಯಗತ್ಯ ~ ಡಾ । ಚೈತ್ರಾ ರಾಮ್

ಉಡುಪಿ ಡಿ.12: ಸಾಫಲ್ಯ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಉಡುಪಿ ಹಾಗೂ ಲಿನೇಸ್ ಕ್ಲಬ್ ಮತ್ತು ರಂಜನಾ ಶ್ರೀಧರ್ ಶೆಟ್ಟಿ ಅವರ ವತಿಯಿಂದ ಅಲೆವೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇಲ್ಚಾವಣಿ ಹಾಗೂ ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ನಡೆಯಿತು.   
 
ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಚೈತ್ರಾ ರಾಮ್ ಅವರು, ಯಾವುದೇ ಆರೋಗ್ಯ ಸಮಸ್ಯೆ ಬಂದ ಮೇಲೆ ವೈದ್ಯರ ಬಳಿ ತಲುಪಿ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ನೊಂದು ಕೊಳ್ಳುವ ಬದಲು ಕಾಯಿಲೆ ಬರುವ ಮೊದಲೇ ಮುಂಜಾಗೃತ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ನಿರಂತರ ಆರೋಗ್ಯ ತಪಾಸಣೆಯಿಂದ ಅನಾರೋಗ್ಯದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.  
 
ಇದೇ ವೇಳೆ ಅವರು ಕಣ್ಣಿನ ವಿಭಾಗ ಮಣಿಪಾಲ ಹಾಗೂ ಡಿಸ್ಟ್ರಿಕ್ಟ್ ಸೊಸೈಟಿ ವತಿಯಿಂದ ಪ್ರತಿ ತಿಂಗಳು ನಾಲ್ಕನೇ ಸೋಮವಾರ ಕಣ್ಣಿನ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದ್ದು,  ವಯೋಸಹಜ ಕಣ್ಣಿನ ಪೊರೆಯ ಸಮಸ್ಯೆಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ 3 ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ  ಪೌಷ್ಟಿಕಾಂಶಯುಕ್ತ ಆಹಾರ, 4 ಶಾಲೆ ಮತ್ತು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊರೋನಾ ಕಿಟ್, ಸಣ್ಣ ಪ್ರಾಯದಲ್ಲಿಯೇ  ವಿಧವೆಯರಾದವರಿಗೆ ಎಮ್ರಾಡರಿ ಸೆಟ್ ನೊಂದಿಗೆ ಹೊಲಿಗೆ ಯಂತ್ರ ಹಾಗೂ ಕಣ್ಣಿನ ತಪಾಸಣೆ ಶಿಬಿರದಲ್ಲಿ ಗುರುತಿಸಲ್ಪಟ್ಟ ಅರ್ಹರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.
 
 ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಡಯಾನ ವಿಠಲ್ ಪೈ, ಸಾಫಲ್ಯ ಟ್ರಸ್ಟ್ ಪ್ರವರ್ತಕರಾದ ನಿರುಪಮ ಪ್ರಸಾದ್, ಝೋನ್ ಚೇರ್ಮನ್ ವರ್ವಾಡಿ ಪ್ರಸಾದ್ ಶೆಟ್ಟಿ, ರಂಜನಾ ಶ್ರೀಧರ್ ಶೆಟ್ಟಿ, ವೈದ್ಯಾಧಿಕಾರಿ ಡಾ.ಚೈತ್ರ ರಾವ್, ಕಾರ್ಯದರ್ಶಿ ವಿಷ್ಣುದಾಸ್ ಪಾಟೀಲ್, ಕೋಶಾಧಿಕಾರಿ ಶ್ರೀಧರ ಭಟ್, ಅಲೆವೂರು ದಿನೇಶ್ ಕಿಣಿ, ಮಮತಾ ದಿವಾಕರ್ ಶೆಟ್ಟಿ, ನೀಲಾವತಿ, ಗ್ರಾಮ ಪಂಚಾಯತ್ ಸದಸ್ಯ ಮನ್ಮೋಹನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply