ಕರ್ನಾಟಕ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಟಿಪ್ಪುವಿನ ಬಗ್ಗೆ ಇದ್ದ ವೈಭವೀ ಕರಣಕ್ಕೆ ಕತ್ತರಿ ಹಾಕಿ ಕೆಲ ಶಿಫಾರಸು ಮಾಡಿದೆ.
ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಈಗ ನಟ ಚೇತನ್ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ.
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ತನ್ನ ನಾಲಗೆಯನ್ನು ಹರಿಬಿಟ್ಟಿದ್ದಾನೆ.
ತಮ್ಮ ಜೀವಿತಾವಧಿಯುದ್ಧಕ್ಕೂ ಬ್ರಿಟಿಷರ ವಿರುದ್ಧ ಹೋರಾಡಿ, ಹುತಾತ್ಮರಾಗಿರುವ ಇವರ ಬಗ್ಗೆ ಮಾತನಾಡುವ ಹಕ್ಕು ಈತನಿಗಿಲ್ಲ.
ಈ ಚಾಳಿಯನ್ನು ಮುಂದುವರಿಸಿದರೆ ರಾಜ್ಯದೆಲ್ಲಡೆ ಉಗ್ರ ಹೊರಾಟ ನಡೆಸಲಾಗುವುದೆಂದು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ದಕ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಎಚ್ಚರಿಕೆ ನೀಡಿದ್ದಾರೆ.