ಸಂಗೊಳ್ಳಿ ರಾಯಣ್ಣ ಅಬಿಮಾನಿ ಬಳಗ ಉಡುಪಿ ಜಿಲ್ಲೆಯ ವತಿಯಿಂದ “ರಾಯಣ್ಣ ಪುರಸ್ಕಾರ”

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತನ್ನ 33ನೇ ವರ್ಷದಲ್ಲಿ ಹುತಾತ್ಮರಾಗಿದ್ದರೂ ಅವರ ಕೆಚ್ಚೆದೆಯ ಸಾರ್ಥರಹಿತ ದೇಶ ಸೇವೆಯಿಂದಾಗಿ ಇನ್ನೂ ಜನಮಾನಸದಲ್ಲಿ ಅವರ ಹೆಸರು ಶಾಶ್ವತ ವಾಗಿ ಉಳಿದಿದೆ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಹೆಳಿದರು. ಅವರು ಸಂಗೊಳ್ಳಿ ರಾಯಣ್ಣ ಅಬಿಮಾನಿ ಬಳಗ ಉಡುಪಿ ಜಿಲ್ಲೆಯ ವತಿಯಿಂದ ಕೇಂದ್ರ ಕಚೇರಿ ಆದಿ ಉಡುಪಿಯ ರಿಗಲ್ ನೆಕ್ಸ್ಟ್ ನಲ್ಲಿ ಇತ್ತಿಚೆಗೆ ನಿವೃತ್ತಿ ಹೊಂದಿದ ವೀರ ಯೋಧ ಕೃಷ್ಣ ಶೆಟ್ಟಿಬೆಟ್ಟು ಇವರಿಗೆ “ರಾಯಣ್ಣ ಪುರಸ್ಕಾರ” ಪ್ರದಾನ ಮಾಡಿ ಮಾತನಾಡಿದರು. ಯಾವುದೇ ಸರಕಾರ ಬರಲಿ ರೈತರು ಹಾಗು ಯೋದರ ಬಗ್ಗೆ ನಿರ್ಲಕ್ಷ ದೋರಣೆ ಎಂದರು.

ಅಬಿಮಾನಿ ಬಳಗದ ರಾಜ್ಯ ಸಂಸ್ಥಾಪಕಾಧ್ಯಕ್ಷ ಸುರೇಶ್ ಗೋಕಾಕ್ ಸಭಾಧಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಗಣೇಶ್ ಸಿ ಬೆಂಗಳೂರು, ಮಂಜುನಾಥ್ ಆರ್ ಚಿತ್ರದುರ್ಗ, ರಾಮ್ ಸೇನಾ ಜಿಲ್ಲಾದ್ಯಕ್ಷ ಜಯರಾಂ ಅಂಬೆಕಲ್ಲು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲ್ಲಾಧ್ಯಕ್ಷ ಸುಜಯ ಪೂಜಾರಿ, ಕರಾಟೆ ಶಿಕ್ಷಕಿ ಪ್ರವೀಣ, ಉದ್ಯಮಿ ಶಾಂತಗೌಡ ಎಮ್ ಚೌದ್ರಿ ಹಾಗು ಗೌರಿ ಕೃಷ್ಣ ಶೆಟ್ಟಿಬೆಟ್ಟು ಉಪಸ್ಥಿತರಿದ್ದರು.

ಜನಾರ್ದನ್ ಕೊಡವೂರು ನಿರೂಪಿಸಿದರು. ಅಬಿಮಾನಿ ಬಳಗ ಉಡುಪಿ ಜಿಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿ, ಪ್ರಸ್ಥಾಪಿಸಿದರು. ಸವಿತಾ ನೋಟಗಾರ್ ದನ್ಯವಾದವಿತ್ತರು.

 
 
 
 
 
 
 
 
 
 
 

Leave a Reply