Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಸಾಲಿಗ್ರಾಮ-ಮಹಿಳಾ ವೇದಿಕೆ ಮಹಾಸಭೆ ಮತ್ತು ಸನ್ಮಾನ ಸಮಾರಂಭ

ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಇದರ ೨೦೨೧ -೨೨ ನೇ ಸಾಲಿನ ಮಹಾಸಭೆಯು ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ ಸಿ. ಹೊಳ್ಳ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್ ಕಾರಂತ ಮಾತನಾಡಿ ಉತ್ತಮ ಸಂಘಟನೆಗಾಗಿ ಕಿರಿಯ ವಯಸ್ಸಿನ ಮಹಿಳೆಯರನ್ನು ಸಂಘಟನೆಯಲ್ಲಿ ಕೈಜೋಡಿಸಿಕೊಂಡು ಇನ್ನೂ ಹೆಚ್ಚು ಸಕ್ರಿಯವಾಗಿಸುವಂತೆ ಸಲಹೆ ಮಾರ್ಗದರ್ಶನದ ನೀಡಿದರು. ಸಾಲಿಗ್ರಾಮ ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲ್ಯಾಮಿನೇಷನ್ ಸಸ್ಪೆನ್ಷನ್ ಪ್ರಾಡಕ್ಟ್ ಇದರ ಹಿರಿಯ ಅಧಿಕ್ಷಕರಾಗಿ ನಿವತ್ತರಾದ ಮಲ್ಲಿಕಾ.ಕೆ ಹೊಳ್ಳ ಕಾರ್ಕಡ ಇವರನ್ನು ಹಾಗೂ ಕೇಂದ್ರ ಸರಕಾರದ ಅಂಚೆ ಕಚೇರಿ ವಿಭಾಗದಲ್ಲಿ ಕಚೇರಿ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿರುವ ವತ್ಸಲ ಉಪಾಧ್ಯಾಯ ಚಿತ್ರಪಾಡಿ ಇವರನ್ನು ಸನ್ಮಾನಿಸಲಾಯಿತು.

ಮಹಿಳಾ ವೇದಿಕೆ ಯೋಜನೆಗಳಲ್ಲಿ ಒಂದಾದ ಅಶಕ್ತರಿಗೆ ನೆರವು ನೀಡಲಾಯಿತು. ಹಾಗೂ ವಿದ್ಯಾರ್ಥಿ ಪುರಸ್ಕಾರ ವಿದ್ಯಾರ್ಥಿ ದತ್ತು ನಿಧಿ ವಿತರಿಸಲಾಯಿತು. ವಿಶೇಷ ಪುರಸ್ಕಾರದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ರ‍್ಯಾಂಕ್ ಪಡೆದ ಕುಮಾರಿ ಸಿಂಚನ ಭಟ್ ಕಾರ್ಕಡ, ಹಾಗೂ ಬಾಲನಟಿ ವೈಷ್ಣವಿ ಅಡಿಗ ಐರೋಡಿ ಸಾಸ್ತಾನ ಇವರನ್ನು ಗೌರವಿಸಲಾಯಿತು. ವೇದಿಕೆಯ ಉಪಾಧ್ಯಕ್ಷೆ ರೇವತಿ ಐತಾಳ ಸ್ವಾಗತಿಸಿದರೆ, ಕಾರ್ಯದರ್ಶಿ ಶಿವಪ್ರಭ ಅಲ್ಸೆ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪೂರ್ಣಿಮಾ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷೆ ವಿಜಯಲಕ್ಷಿ÷್ಮ ತುಂಗ ವಂದಿಸಿದರು. ಶುಭಭಾಗವತ್ ಮತ್ತು ತಂಡದವರಿAದ ಸಾಂಸ್ಕçತಿಕ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಣೆಗೈದರು. ವಸುದಾ ಉಡುಪ,ಲತಾ ಹೊಳ್ಳ, ಗೀತಾ ಅಧಿಕಾರಿ, ಭಾರತಿ ಹೆರ್ಳೇ ಸನ್ಮಾನ ಪತ್ರ ವಾಚಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!