​​ಸಾಕ್ಷರತೆಯಿಂದ ಹಕ್ಕುಗಳ ಬಗ್ಗೆ ಅರಿಯಲು ಸಾಧ್ಯ : ನ್ಯಾ.ಶರ್ಮಿಳಾ

ಉಡುಪಿ​:​ ಯಾವುದೇ ವ್ಯಕ್ತಿ ಸಾಕ್ಷರನಾದರೆ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಲುಸಾದ್ಯವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದುವುದು ಅತ್ಯಂತ ಅಗತ್ಯ ಎಂದು ಹಿರಿಯ ಸಿವಿಲ್ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು.

ಅವರು ಇಂದು ಕಾಜಾರಗುತ್ತು ನ ಜಿಲ್ಲಾ ಕಾರಾಗೃಹದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ,​ ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ​ ಉಡುಪಿ,ಜಿಲ್ಲಾ ಕಾರಾಗೃಹ ಉಡುಪಿ ಇವರ ಸಹಯೋಗದಲ್ಲಿ “ಶಿಕ್ಷಣದಿಂದ ಬದ ಲಾವಣೆ” ಕಾರಾಗೃಹದ ಅನಕ್ಷರಸ್ಥ​ ಹಾಗೂ ಅರೆ ಅನಕ್ಷರಸ್ಥ ಬಂಧಿಗಳಿಗೆ ಆಯೋಜಿಸಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಕ್ಷರತೆ ಪಡೆಯುವುದು ವ್ಯಕ್ತಿಯ ಘನತೆ ಹಾಗೂ ಹಕ್ಕು ಆಗಿದೆ. ವ್ಯಕ್ತಿ ಸಾಕ್ಷರತೆಯ ಜೊತೆಗೆ ಮಾನವೀಯ​ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು, ಅನಕ್ಷರತೆಯಿಂದ ಬಡತನ, ಜನಸಂಖ್ಯೆ ನಿಯಂತ್ರಣ ಸಮಸ್ಯೆ,ಲಿಂಗ​ ಅಸಮಾನತೆ ಉಂಟಾಗಲಿದ್ದು,ಇದನ್ನು ತೊಡೆದು ಹಾಕಿ ದೇಶವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು​ ಸಾಕ್ಷರತೆಯಿಂದ ಮಾತ್ರ ಸಾಧ್ಯ ಎಂದು ಆಭಿಪ್ರಾಯ ವ್ಯಕ್ತಪಡಿ ಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿ ಕಾರಿ​ ನಾಗೇಂದ್ರಪ್ಪ, ಪ್ರತಿಯೊಬ್ಬರಿಗೂ ಕನಿಷ್ಠ ಓದುವ ಸಾಮರ್ಥ್ಯ ಅಗತ್ಯ ಇದರಿಂದ ತಮ್ಮ ದೈನಂದಿನ ವ್ಯವಹಾರಗಳನ್ನು​ ಸುಗಮವಾಗಿ ಮಾಡಲು ಸಾಧ್ಯ, ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾವಂತರದ್ದಾಗಿದೆ.
ವಯಸ್ಕರ ಶಿಕ್ಷಣ ಇಲಾಖೆಯಿಂದ ಸಿದ್ದಪಡಿಸಿರುವ ಪಠ್ಯವು ಅತ್ಯಂತ ಸರಳವಾಗಿದ್ದು, ಇದರಿಂದ 2 ತಿಂಗಳಲ್ಲಿ​ ಅನಕ್ಷರಸ್ಥರು ಸಾಕ್ಷರರಾಗಲು ಸಾದ್ಯವಿದೆ ಎಂದರು.​ ಜಿಲ್ಲಾ ಕಾರಾಗೃಹದಲ್ಲಿನ 7 ಮಂದಿ ಅನಕ್ಷರಸ್ಥರು ಮತ್ತು 20 ಮಂದಿ ಅರೆ ಅನಕ್ಷರಸ್ಥರಿಗೆ ಈ ತರಬೇತಿ​ ಆಯೋಜಿಸಲಾಗಿದೆ.​ ಕಾರಾಗೃಹ ದಲ್ಲಿನ ಗ್ರಂಥಾಲಯವನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಉದ್ಘಾಟಿ ಸಿದರು.
​​
ಎಎಸ್ಪಿ ಕುಮಾರ ಚಂದ್ರ ಕಾರಾಗೃಹದಲ್ಲಿನ ಅನಕ್ಷರಸ್ಥರು ಮತ್ತು ಅರೆ ಅನಕ್ಷರಸ್ಥರಿಗೆ ಕಲಿಕಾ ಪುಸ್ತಕ ಗಳನ್ನು​ ವಿತರಿಸಿದರು.​ ಹಿರಿಯ ವಕೀಲೆ ಅಮೃತಕಲಾ ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ಸ್ವಾಗತಿಸಿ​ ನಿರೂಪಿಸಿದರು. ಸಂಜಯ್ ಕುಮಾರ್ ವಂದಿಸಿದರು.​​
 
 
 
 
 
 
 
 
 
 
 

Leave a Reply