ಪತ್ನಿಗೆ ವಿಚ್ಛೇದನ ನೀಡಬಹುದು- ಎಸ್. ಎಸ್. ತೋನ್ಸೆ

ಗುಜರಾತ್ ರಾಜ್ಯದ ಸೂರತಿನ ವ್ಯೆದ್ಯ ಮೇಲಿಂದ್ ದೇವ್ ಅರ್ಬುದ ಖಾಯಿಲೆಯ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದು ಅವರ ಯೋಗಕ್ಷೇಮ ನೋಡಿಕೊಳ್ಳುತಿದ್ದರು. ಅವರ ಪತ್ನಿ ವ್ಯೆದ್ಯೆ ಮಿಥಾಲಿ ಅದನ್ನು ವಿರೋಧಿಸಿ ದಿನನಿತ್ಯ ಕಿರುಕುಳ ಕೊಡುತ್ತಿದ್ದರು. ಇದರಿಂದ ತನಗೆ ಮಾನಸಿಕ ಕಿರುಕುಳ ಆಗುತ್ತದೆ ಎಂದು ಪತ್ನಿಯ ವಿಚ್ಛೇದನ ಕೋರಿ ಸೂರತ್ ಕೌಟುಂಬಿಕ ನ್ಯಾಯಾಲಯದಲ್ಲಿ ವ್ಯೆದ್ಯ ಮೇಲಿಂದ್ ಸಲ್ಲಿಸಿದ ಅರ್ಜಿ ತಿರಸ್ಕ್ರತಗೊಂಡ ಕಾರಣ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾ. ಭಾಸ್ಕರ್ ಭಟ್ಟಾಚಾರ್ಯ ಮತ್ತು ನ್ಯಾ. ಜೆ. ಬಿ. ಪರ್ದಿವಾಲ ದ್ವಿಸದಸ್ಯಪೀಠ ಪತ್ನಿಯ ವರ್ತನೆ ಮಾನಸಿಕ ಕಿರುಕುಳಕ್ಕೆ ಸಮ. ಕಾನೂನಿನಂತೆ ವಿಚ್ಛೇದನಕ್ಕೆ ಅವಕಾಶವಿದೆ ಎಂಬುದಾಗಿ ತೀರ್ಪು ನೀಡಿದೆ. ತಂದೆ, ತಾಯಿಯ ಸೇವೆ ಮಾಡುತ್ತಿರುವ, ಮಾಡಲಿರುವ ಪತಿಯಂದಿರಿಗೆ ಪತ್ನಿ ಕಿರುಕುಳ ನೀಡಿದಲ್ಲಿ ಅದರಿಂದ ಮುಕ್ತರಾಗಲು ಅವಕಾಶ ಕಲ್ಪಿಸಿದ ಸಂತೋಷದ ತೀರ್ಪಾಗಿದೆ ಎನ್ನುತ್ತಾರೆ ಬೆಂಗಳೂರಿನ ನಗರ ಸಂಶೋಧನಾ ಕೇಂದ್ರದ ರಾಜ್ಯ ಮಾಜಿ ಸಂಪನ್ಮೂಲ ವ್ಯಕ್ತಿ ಎಸ್. ಎಸ್. ತೋನ್ಸೆ.

 
 
 
 
 
 
 
 
 
 
 

Leave a Reply