Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ರೋಟರಿ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ – 22

ಕಲಾವಿದರಿಗೆ ಕಲಾರಾಧಕರ ಮೆಚ್ಚುಗೆ ಯೇ ಪ್ರಶಸ್ತಿ, ಸಂತಸದ ಕರತಾಡನವೇ ಪುರಸ್ಕಾರ ಹಾಗಾಗಿ ಕಲಾವಿದರ ಕಲಾ ಪ್ರೌಢಿಮೆಯನ್ನು ಗುರುತಿಸಿ ಗೌರವಿಸೋಣ ಎಂದು ರೋಟರಿ ಜಿಲ್ಲೆ 3182, ವಲಯ ನಾಲ್ಕು ಆಯೋಜಿಸಿದ್ದ ರೋಟರಿ ಸಾಂಸ್ಕೃತಿಕ ರಂಗ ಹಬ್ವನ್ನು ಉದ್ಘಾಟಿಸಿ ರೋಟರಿ‌ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ರೊ. ಶುಭಾಶ್ಚಂದ್ರ ಕೊಡ್ಲಾಡಿ ಮಾತನಾಡಿದರು. ರೋಟರಿ ಉಡುಪಿ ರಾಯಲ್ ನ ಆತಿಥ್ಯದಲ್ಲಿ ಆಯೋಜಿಸಿದ್ದ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ -22 ಇದನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು ರೋಟರಿ ಮಿತ್ರರ ಕಲಾ ಪ್ರತಿಭೆಗೆ ವೇದಿಕೆ ಒದಗಿಸುವ ಈ ಒಂದು ಸಾಂಸ್ಕೃತಿಕ ಸ್ಪರ್ಧೆ ಯನ್ನು ಆಯೋಜಿಸಿದ ರೋಟರಿ ಉಡುಪಿ ರಾಯಲ್ ಗೆ ಅಭಿನಂದನೆ ಸಲ್ಲಿಸಿದರು. ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸಮೃದ್ಧಿ ಕುಂದಾಪುರ ತಮಟೆಯನ್ನು ಬಡಿಯುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕರ್ಣಾರ್ಜುನ ಕಾಳಗದ ಒಂದು ತುಣಕನ್ನು ಪ್ರದರ್ಶಿಸಿದರು. ರೋಟರಿ‌ ವಲಯ ನಾಲ್ಕರ ಸಹಾಯಕ ಗವರ್ನರ್ ರೊ. ರಾಮಚಂದ್ರ ಉಪಾಧ್ಯಾಯ, ವಲಯ ಸೇನಾನಿಗಳಾದ ರೊ.ದಯಾನಂದ ನಾಯಕ್,ರೊ ರಾಜೇಶ್ ಪಾಲನ್,ರೊ.ಗೀತಾಶ್ರೀ ಎಮ್ ಉಪಾಧ್ಯ ಉಪಸ್ಥಿತರಿದ್ದರು. ರೋಟರಿ ಉಡುಪಿ ರಾಯಲ್ ನ ಅಧ್ಯಕ್ಷರಾದ ರೊ ಬಾಲಕೃಷ್ಣ ಎಸ್ ಮಡ್ಡೋಡಿ ಅಧ್ಯಕ್ಷತೆ ವಹಿಸಿದ್ದರು.ವಲಯ ಸಾಂಸ್ಕೃತಿಕ ಸಂಯೋಜಕಿ ರೊ.ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು.ಕಾರ್ಯದರ್ಶಿ ರೊ. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!