Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಶಾಲಾ ಬ್ಯಾಗ್ ಮತ್ತು ಬರವಣಿಗೆ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ

‘ರೋಟರಿ ಕ್ಲಬ್ ಕೋಟ’ ಸಂಸ್ಥೆಯ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು – ಐರೋಡಿ ಶಾಲೆಯ ಎಲ್ಲಾ ಮಕ್ಕಳಿಗೂ “ಶಾಲಾ ಬ್ಯಾಗ್ ಮತ್ತು ಬರವಣಿಗೆ ಸಾಮಗ್ರಿಗಳ ವಿತರಣೆ ಮಾಡಲಾಯಿತು. ಮುಖ್ಯಮಂತ್ರಿ ಪದಕ ವಿಜೇತರಾದ ರೋ. ಶ್ರೀ ಶಿವಾನಂದ ನಾಯರಿ, ಪೊಲೀಸ್ ಇಲಾಖೆ, ಕಾರ್ಯದರ್ಶಿ & ಮುಂದಿನ ಅಧ್ಯಕ್ಷರು ವೈಯಕ್ತಿಕ ನೆಲೆಯಲ್ಲಿ ಶಾಲಾ ಮಕ್ಕಳ ಉಪಯೋಗಿ ಸಾಮಗ್ರಿಗಳನ್ನು ವಿತರಿಸಿ ಮುಂದೆಯೂ ಶಾಲಾಭಿವೃದ್ಧಿಗೆ ಕೈ ಜೋಡಿಸುವುದಾಗಿಯೂ ಭರವಸೆ ನೀಡಿದರು. ಶ್ರೀ ದಿನೇಶ್ ಬಾಂಧವ್ಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಯ ಅಧ್ಯಕ್ಷರು ರೋ.ಉದಯ ಕುಮಾರ್ ಶೆಟ್ಟಿ; ವಲಯ ಸೇನಾನಿ ರೋ. Dr. ಗಣೇಶ್ ಯು.; ರೋ. ವಿಷ್ಣುಮೂರ್ತಿ ಉರಾಳ; ಮಾಜಿ ಅಧ್ಯಕ್ಷರು ರೋ ರಾಘವೇಂದ್ರ ಆಚಾರ್, ಸದಸ್ಯರಾದ ರೋ ನಾಗರಾಜ್ ಆಚಾರ್, ಮಾಜಿ ಅಧ್ಯಕ್ಷರು ರೋ ದಯಾನಂದ ಆಗಮಿಸಿದ್ದರು.
ಶಾಲೆಯ ವತಿಯಿಂದ ರೋಟರಿ ಸಂಸ್ಥೆಯ ಅಧ್ಯಕ್ಷರು ಶ್ರೀ ಉದಯ್ ಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿ ಹಾಗೂ ದಾನಿಗಳು ಶ್ರೀ ಶಿವಾನಂದ್ ನಾಯರಿಯವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ವಹಿಸಿದ್ದರು. ವೇದಿಕೆಯಲ್ಲಿ SDMC ಉಪಾಧ್ಯಕ್ಷರಾದ ಶ್ರೀ ವಿಜಯ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ, SDMC ಸದಸ್ಯರಾದ ಶ್ರೀ ರಾಜು ಮಾರಕಾಲ, ಶ್ರೀ ಶಿವರಾಮ ಕುಲಾಲ್ , ಶ್ರೀ ರಮೇಶ್ ಕುಲಾಲ್, ಶ್ರೀ ಮಂಜನ ಗೌಡ ಪಾಟೀಲ್, ಶ್ರೀ ಸತೀಶ್ ನಾಯ್ಕ್, ಶ್ರೀಮತಿ ಕವಿತಾ , ಶ್ರೀಮತಿ ಅನಿತಾ, ಶ್ರೀಮತಿ ಆಶಾ, ಶ್ರೀಮತಿ ಸುಶೀಲಾ, ಪೋಷಕರಾದ ಶ್ರೀಮತಿ ಉಷಾ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ದೀಕ್ಷಾ, ಶ್ರೀಮತಿ ಸುಷ್ಮಾ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮಕ್ಕೆ ಶಿಕ್ಷಕರಾದ ಮಹೇಶ್ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಭವಾನಿ ನಿರೂಪಿಸಿದರು. ಹಳೆ ವಿದ್ಯಾರ್ಥಿ ಶ್ರೀ ಲೊಯ್ಡ್ ರೋಡ್ರಿಗಸ್, ಬಿಸಿಯೂಟ ಅಡುಗೆಯವರಾದ ಶ್ರೀಮತಿ ಜ್ಯೋತಿ ಮತ್ತು ಶ್ರೀಮತಿ ಶಾರದಾ ಸಹಕರಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!