ಸಾಹೇಬ್ರಕಟ್ಟೆ ಯ ಮಹಾತ್ಮಾ ಗಾಂಧಿ ಪ್ರೌಢ ಶಾಲೆಗೆ ರೋಟರಿ ಕ್ಲಬ್ ಸಾಹೇಬ್ರಕಟ್ಟೆ ವತಿಯಿಂದ ಕೊಡಮಾಡಿದ 40000 ರೂ ಮೌಲ್ಯದ writing pad ಕುರ್ಚಿಗಳನ್ನು ರೋಟರಿ ಜಿಲ್ಲಾ ಗವರ್ನರ್ ರೋ. ಎಂ ಜಿ ರಾಮಚಂದ್ರ ಮೂರ್ತಿ ಯವರು ತಮ್ಮ ಅಧಿಕೃತ ಕ್ಲಬ್ ಭೇಟಿಯ ದಿನದಂದು ಹಸ್ತಾಂತರಿಸಿದರು. ಸಂಸ್ಥೆಯ ಪರವಾಗಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೆ ಪ್ರಸಾದ್ ಶೆಟ್ಟಿ ಕೊಡುಗೆಯನ್ನು ಸ್ವೀಕರಿಸಿ ಶ್ರೀಯುತರನ್ನು ಸನ್ಮಾನಿಸಿದರು ರೋಟರಿ ಸಾಹೇಬ್ರಕಟ್ಟೆಯ ಅಧ್ಯಕ್ಷ ರೋ. ಯು ಪ್ರಸಾದ್ ಆರ್ ಭಟ್ ಅಧ್ಯಕ್ಷತೆ ವಹಿಸಿದ್ದರು ರೋಟರಿಯ ಪರವಾಗಿ ಜಿಲ್ಲಾ ಸಹಾಯಕ ಗವರ್ನರ್ ರೋ. ಪದ್ಮನಾಭ ಕಾಂಚನ್, ವಲಯ ಪ್ರತಿನಿಧಿ ರೋ ವಿಜಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ದಾಸ್ ,ಶಾಲಾ ಆಡಳಿತ ಮಂಡಳಿಯ ಸದಸ್ಯ ರಮೇಶ್ ಶಿರಿಯಾರ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೋ ಎಂ ರವೀಂದ್ರನಾಥ್ ಕಿಣಿ ಹಾಗೂ ರೋಟರಿಯ ಸಕಲ ಪದಾಧಿಕಾರಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ ವಂದಿಸಿದರು.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.