ರೊನಾಲ್ಡೊ ಬದಿ ಸರಿಸಿದ್ದು ಎರಡೇ ಬಾಟಲಿ: ಕೋಕಾ-ಕೋಲಾ ಕಂಪೆನಿಗೆ ಮಾತ್ರ ಕೋಟಿ ಕೋಟಿ ನಷ್ಟ

ಹಂಗೇರಿ: ಅಭಿಮಾನಿಗಳು ತಾವು ಇಷ್ಟಪಡುವ ಸೆಲೆಬ್ರಿಟಿಗಳನ್ನು ಅವರ ನಡೆಗಳನ್ನ ಎಷ್ಟೊಂದು ನಿಖರವಾಗಿ ಪಾಲಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಹೌದು, ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾಗೋಷ್ಠಿಯೊಂದರಲ್ಲಿ ಅಲ್ಲೇ ಇದ್ದ ಎರಡು ಕೋಕಾ-ಕೋಲಾ ಬಾಟಲಿಗಳನ್ನು ಸ್ಥಳಾಂತರಿಸಿ, ನೀರಿನ ಬಾಟಲಿ ಹಿಡಿದು ಇದನ್ನೇ ಕುಡಿಯಿರಿ ಎಂದಿದ್ದರು. ಇದು ಕಂಪನಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲಿ ಕೋಕಾ ಕೋಲಾವು ಒಂದು. ಆದ್ದರಿಂದ ಅದನ್ನು ಅಲ್ಲಿಡುವುದು ಶಿಷ್ಟಾಚಾರ. ಅದನ್ನೇ ಬದಿಗೆ ಸರಿಸಿರುವುದರಿಂದ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳುವ ಸಾಧ್ಯತೆಯೂ ಇದೆ.

ಅಲ್ಲದೇ ಕ್ರಿಸ್ಟಿಯಾನೋ ರೊನಾಲ್ಡೊ ಈ ಕೆಲಸದಿಂದ ಕಂಪನಿಗೆ ಭಾರಿ ನಷ್ಟವಾಗಿದೆ. ಕಂಪನಿಯ ಶೇರು ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.

 
 
 
 
 
 
 
 
 
 
 

Leave a Reply