ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದಿಂದ ಪರಿಹಾರ ಸಾಮಾಗ್ರಿಗಳ ಕಿಟ್, ಮಾಸ್ಕ್ ಮತ್ತು ಸೋಪುಗಳ ವಿತರಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕವು ದಿನಾಂಕ ಬುಧವಾರದಂದು​​, ನವಚೈತನ್ಯ ಯುವಕ ಮಂಡಳಿ, ಪೆರಂಪಳ್ಳಿಯ ಸಹಯೋಗದೊಂದಿಗೆ ಗುರುತಿಸಲಾದ ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್ ವಿತರಣೆಯನ್ನು ನಡೆಸಲಾಯಿತು​.​                              
ಈ ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಉದ್ಘಾಟಿಸಿ, ರೆಡ್ ಕ್ರಾಸ್ ಸಂಸ್ಥೆಯು ಅಂತ​ರಾಷ್ಟ್ರೀಯ ಮಟ್ಟದಲ್ಲಿ ಮಾನವೀಯ ಸೇವೆಯನ್ನು ಮಾಡುವ ಸಂಸ್ಥೆ ಯಾಗಿದ್ದು, ಇದು ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿ, ನೊಂದವರ, ದೀನದಲಿತರ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟು, ಸೇವೆಯನ್ನು ಮಾಡುತ್ತಾ ಬಂದಿರುತ್ತದೆ. 
 
ಈ ಸಂಸ್ಥೆಗೆ ತಾನು ಸಭಾಪತಿಯಾಗಿ ಬಂದಿರುವುದು ಬಹಳ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಸದ್ರಿ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಸೇವೆ ನೀಡುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಗೌರವ ಕಾರ್ಯದರ್ಶಿ ಶ್ರೀ ಕೆ. ಜಯರಾಮ್ ಅಚಾರ್ಯ ಸಾಲಿಗ್ರಾಮ ಉಪಸ್ಥಿತರಿದ್ದು ರೆಡ್ ಕ್ರಾಸ್ ಸಂಸ್ಥೆಯು ಮಾಡುತ್ತಿರುವ ಸೇವೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು. 
 
ಅಧ್ಯಕ್ಷತೆಯನ್ನು ಶ್ರೀ ಕೀರ್ತನ್ ಕುಮಾರ್ ನವಚೈತನ್ಯ ಯುವಕ ಮಂಡಲ ಇವರು ವಹಿಸಿದ್ದರು. ನವಚೈತನ್ಯ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸದ್ರಿ ಕಾರ್ಯ ಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂಧಿ ಶ್ರೀಮತಿ ಸುನೀತಾ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಿಬ್ಬಂಧಿ ಅನುಷಾ ಉಪಸ್ಥಿತರಿದ್ದರು. 
 
ಈ ಸಂದರ್ಭದಲ್ಲಿ ಪೆರಂಪಳ್ಳಿ ಗುರುತಿಸಲಾದ 55 ಫಲಾನುಭವಿಗಳಿಗೆ ಕಿಚನ್ ಸೆಟ್ಸ್, ಹೊದಿಕೆ, ಸೀರೆ, ಟರ್ಪಲಿನ್, ಫೇಸ್ ಮಾಸ್ಕ್ ಮತ್ತು ಸೋಪುಗಳನ್ನು ವಿತರಿಸಲಾಯಿತು.

​​


 
 
 
 
 
 
 
 
 
 
 

Leave a Reply