ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ​ ಘಟಕದಲ್ಲಿ​ ವಿಕಲಚೇತನರಿಗೆ ಪ್ರಥಮ ​ಪ್ರಾಶಸ್ತ್ಯ 


ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ​ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವು ಉಡುಪಿ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ​ ಘಟಕದಲ್ಲಿ ಬಹಳ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ​ ವಿಕಲಚೇತನರಿಗೆ ಸೂಕ್ತ ನ್ಯಾಯ ಒದಗಿಸಿಕೊಡಲು ಶ್ರಮ ವಹಿಸುತ್ತಿದೆ.

ಕೇಂದ್ರದಲ್ಲಿ ೧೦ ಜನ ತಜ್ಙರ ತಂಡವಿದ್ದು ಫಿಸಿಯೋಥೆರಪಿ, ಮಾತಿನ ತರಬೇತಿ,​ ದೈನಂದಿನ ಚಟುವಟಿಕೆಗಳ ತರಬೇತಿ ಮುಂತಾದ ಹಲವಾರು ಸೇವೆಗಳನ್ನು​ ಉಚಿತವಾಗಿ ನೀಡಲಾಗುತ್ತಿದೆ. ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ಬೇರೆ​ ಬೇರೆ ಮೂಲಗಳಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು ಕೃತಕ​ ಕಾಲು ಕೈ ಕ್ಯಾಲಿಪರ್ ಮುಂತಾದ ಕೃತಕ ಆವಯವಗಳನ್ನು ಕೇಂದ್ರದಲ್ಲೇ​ ತಯಾರಿಸಿ ವಿತರಿಸಲಾಗುತ್ತಿದೆ.

​ಶನಿವಾರದಂದು ಕೆಂದ್ರದಲ್ಲಿ ತಯಾರಿಸಿದ ಕೃತಕ ಕಾಲನ್ನು​ ಫಲಾನುಭವಿಗೆ ಅಭ್ಯಾಸ ಮಾಡಲು ವಿತರಿಸಲಾಯಿತು. ಈ ಸಂದರ್ಭ ಭಾರತೀಯ ರೆಡ್​​ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಗೌರವ​ ಕಾರ್ಯದಶಿ  ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಖಜಾಂಚಿ ಡಾ. ಅರವಿಂದ​ ನಾಯಕ್ ಅಮ್ಮುಂಜೆ, ಕೇಂದ್ರದ ನೋಡಲ್ ಅಧಿಕಾರಿ ಪಿ.ವಿ ಸುಬ್ರಮಣಿ, ​ ​ಇಂಜಿನಿಯರ್ ವಿಕ್ಕಿ ಕುಮಾರ್, ರೆಡ್ ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂಧಿಗಳು​ ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply