ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ತರಬೇತಿ :ಸಮಾರೋಪ

ಉಡುಪಿ, ಏಪ್ರಿಲ್ 22 (ಕವಾ): ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕದ ಸಂಯುಕ್ತ
ಆಶ್ರಯದಲ್ಲಿ, ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ಹಮ್ಮಿಕೊಳ್ಳಲಾಗಿದ್ದ
ಎರಡು ದಿನದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಮಂಗಳವಾರ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ನಡೆಯಿತು.
ರಾಜ್ಯ ಶಾಖೆ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು, ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ನಾಯಕತ್ವದ
ಗುಣಗಳನ್ನು ಬೆಳೆಸಿಕೊಂಡು, ಬೇರೆಯವರ ಕಷ್ಟಗಳಿಗೆ ಸ್ವಂದಿಸುವ ಮನೋಭಾವನೆ ಬೆಳೆಸಿಕೊಳ್ಳಲು ಶಿಕ್ಷಕರು ಪ್ರೇರಣೆ ನೀಡಬೇಕು.
ವಿದ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ರೆಡ್‌ಕ್ರಾಸ್ ಸಂಸ್ಥೆ
ಮತ್ತು ಅದರ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ್ ಶೆಟ್ಟಿ, ಜೂನಿಯರ್ ರೆಡ್‌ಕ್ರಾಸ್ ನಿರ್ದೇಶಕ ಡಾ. ಸಿ.ಎನ್.ಎನ್ ರಾಜು,
ನಗರ ಸಂಚಾರಿ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್, ಪ್ರಥಮ ಚಿಕಿತ್ಸಾ ತರಬೇತುದಾರ ಡಾ. ಕೀರ್ತಿ ಪಾಲನ್,
ರಾಜೇಂದ್ರ ಭಟ್ ಕೆ., ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಉಪ ಹೋಮ್ ಕಮಾಂಡೆAಟ್ ಅಧಿಕಾರಿ ರಮೇಶ್, ಡಾ. ಸುರೇಶ್
ಶೆಣೈ, ಗೌರವ ಖಜಾಂಚಿ ರಮಾದೇವಿ, ರಾಜ್ಯ ಶಾಖೆಯ ಜೂನಿಯರ್ ರೆಡ್ ಕ್ರಾಸ್ ಕೋಆರ್ಡಿನೇಟರ್ ಆನಂದ ಗೌಡ, ಡಿಡಿಆರ್.ಸಿ ಮತ್ತು ರೆಡ್
ಕ್ರಾಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜೂನಿಯರ್ ರೆಡ್ ಕ್ರಾಸ್ ಡೈರೆಕ್ಟರ್ ಮತ್ತು ಪ್ರೋಗ್ರಾಮ್ ಕೋ-ಆರ್ಡಿನೇಟರ್ ಪದ್ಮಾಕಿಣಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಬಿ.
ರತ್ನಾಕರ ಶೆಟ್ಟಿ ವಂದಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಯ 49 ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳು ಭಾಗವಹಿಸಿ, ತರಬೇತಿಯನ್ನು
ಪಡೆದುಕೊಂಡರು. ಕಾರ್ಯಗಾರದಲ್ಲಿ ಭಾಗವಹಿಸಿದ ಅಧ್ಯಾಪಕರುಗಳಿಗೆ ಪ್ರಮಾಣಪತ್ರ ಮತ್ತು ಮಾಸ್ಕ್ಗಳನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply