ಬರೀ ಬಾಯಿ ಮಾತು ಬಿಡಿ, ಜನರ ರಕ್ಷಣೆ ಮಾಡಿ~ ಡಾ ರವಿ ಶೆಟ್ಟಿ ಬೈಂದೂರು,

ಬೆಂಗಳೂರು: ತನ್ನ ಕಾರ್ಯಕರ್ತರಿಗೆ ರಕ್ಷಣೆ ನೀಡಲಾಗದವರು ಇನ್ನು ಸಾಮಾನ್ಯ ಜನರಿಗೆ ಎಂತ ರಕ್ಷಣೆ ನೀಡುತ್ತಾರೆ, ಉದ್ರಿಕ ಭಾಷಣ ಮಾಡಿ ಯುವ ಜನತೆಯನ್ನು ದಿಕ್ಕು ತಪ್ಪಿಸಬೇಡಿ, ನಿಮ್ಮ ಭಾಷಣದಿಂದ ಸಾಯುವುದು ಸಾಮಾನ್ಯ ಜನ ಹೊರತು ನಿಮ್ಮ ಮನೆ ಮಕ್ಕಳಲ್ಲ, ಹಿಂದುತ್ವ ಹಿಂದೂ ಎಂದು ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಬಂದ ನಂತರ ದಿನ ದಿಂದ ದಿನ ಹಿಂದೂ ಮುಸ್ಲಿಂ  ಹತ್ಯೆಗಳು ಮತ್ತು ಘರ್ಷಣೆಗಳು ಹೆಚ್ಚಾಗಿದ್ದು , ಈ ಹಿಂದೆ ಹತ್ಯೆಯಾದ ಕುಟುಂಬಗಳಿಗೆ ಇನ್ನೂ ಸರಿಯಾಗಿ ನ್ಯಾಯ ಸಿಕ್ಕಿಲ್ಲ ಹೀಗಿರುವಾಗ ಈಗ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಹತ್ಯೆ ಕರ್ನಾಟಕದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿರುವುದಕ್ಕೆ ಸಾಕ್ಷಿ ಎಂದು ರಾಜ್ಯ ಕಾರ್ಮಿಕ ಮುಖಂಡ.      ಡಾ. ರವಿಶೆಟ್ಟಿ ಬೈಂದೂರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಭ್ರಷ್ಟಾಚಾರ ಮಾಡುತ್ತಿದೆ ಮತ್ತೊಂದು ಕಡೆ ಜನರಿಗೆ ನಿರಂತರವಾಗಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಜಿಎಸ್‌ಟಿ ಏರಿಕೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಇಷ್ಟೆಲ್ಲ ಜನರಿಗೆ ತೊಂದರೆ ಕೊಟ್ಟ ರಾಜ್ಯ ಸರ್ಕಾರ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಗದೆ ಹೆಣಗುತ್ತಿರುವುದು ನೋಡಿದರೆ ಇಂತಹ ಅಸಮರ್ಥ ಸರ್ಕಾರವನ್ನು ನಾವು ಎಂದು ಕಂಡಿಲ್ಲ , ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು  ಯಾವ ಮುಖ ಇಟ್ಟುಕೊಂಡು ಇನ್ನು ರಾಜೀನಾಮೆ ಕೊಡದೆ ಇದ್ದಾರೆ ಎಂದು  ಪ್ರಶ್ನಿಸಿದ್ದಾರೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಬಿಜೆಪಿ ಸರಕಾರ ವಿಫಲವಾಗಿದೆ, ಸರ್ಕಾರ ಬರಿ ಕಠಿಣ ಕ್ರಮ ಕಠಿಣ ಕ್ರಮ ಎನ್ನುತ್ತಾ ಬರಿ ಮಾತಿಗೆ ಮಾತ್ರ ಸೀಮಿತವಾಗಿದೆ ಹೊರತು ಅಮಾಯಕರ ಮೇಲೆ ದುಷ್ಕರ್ಮಿಗಳ ದಾಳಿ ಮಾತ್ರ ಕಡಿಮೆ ಆಗಿಲ್ಲ ಮುಂದುವರಿತಾನೆ ಇದೆ ಅಮಾಯಕರು ಮತ್ತಷ್ಟು ಬಲಿಯಾಗುತ್ತಿದ್ದಾರೆ, ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಿ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಬೇಕಾದ ಸರ್ಕಾರ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸುತ್ತಿರುವುದು ಎಷ್ಟು ಸರಿ ಬರಿ ಬಾಯಿ ಮಾತಿನಲ್ಲಿ ಪ್ರಪಂಚ ಸುತ್ತಿಸುವ ನಾಯಕರುಗಳು ಮಾತನ್ನು ಬಿಟ್ಟು ಮೊದಲು ಅಮಾಯಕ ಜನರ ರಕ್ಷಣೆಗೆ ಮುಂದಾಗಲಿರ ಎಂದು ಆಗ್ರಹಿಸಿದರು,
ಯುವ ಮುಖಂಡ ಪ್ರವೀಣ್ ನೆಟ್ಟಾರೆ ಕೊಲೆ ಖಂಡನೀಯ. ಪ್ರಕರಣದ ಆರೋಪಿಗಳನ್ನು ಯಾವುದೇ ಜಾತಿ ಧರ್ಮ ಲೆಕ್ಕಿಸದೆ ತಕ್ಷಣ ಬಂಧಿಸಿ,ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕಾಗಿದೆ . ಚುನಾವಣೆ ಸಂದರ್ಭ ಹಿಂದು ಮುಸ್ಲಿಮರ ಹತ್ಯೆಯನ್ನು ಮುಂದೆ ಇಟ್ಟು ಕೊಂಡು ರಾಜಕೀಯ ಬೇಳೆ ಬೇಯಿಸುವುದು ಬಿಜೆಪಿಗೆ ಚಾಳಿಯಾಗಿ ಹೋಗಿದೆ , ಹಿಂದೂ ಕಾರ್ಯ ಕರ್ತರ ಹತ್ಯೆ ವಿಷಯವನ್ನೇ ಇಟ್ಟುಕೊಂಡು ಆಡಳಿತಕ್ಕೆ ಬರುವ ಬಿಜೆಪಿ ಸರ್ಕಾರ ಈ ಚಾಳಿಯನ್ನು ಇಲ್ಲಿಗೆ ಬಿಡಬೇಕು ಇಲ್ಲದಿದ್ದರೆ ಕಾರ್ಯಕರ್ತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರಾವಳಿಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸರ್ವ ಪಕ್ಷಗಳು ಸರ್ವಧರ್ಮಗಳ ಸಭೆ ನಡೆಸಿ ಸಮನ್ವತೆಯನ್ನು ಸಾರಬೇಕು ಅದನ್ನು ಬಿಟ್ಟು ಉಗ್ರ ಭಾಷಣಗಳನ್ನು ಆಡಿ ಯುವ ಜನತೆಯನ್ನು ದಿಕ್ಕು ತಪ್ಪಿಸುವಂತ ಕೆಲಸ ಮಾಡಬಾರದು ಅಂತಹ ಕೆಲಸ ಮಾಡಿದಲ್ಲಿ ಮುಂದೆ ಜನರೇ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ತಿಳಿಸಿದರು.
 
 
 
 
 
 
 
 
 
 
 

Leave a Reply