Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಲೋಕಾರ್ಪಣೆ

ನವದೆಹಲಿ : ರಾಷ್ಟ್ರಪಿತ ಮಹಾತ್ಮ ಗಾಂಧಿ ಹಮ್ಮಿಕೊಂಡಿದ್ದ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಅಂಗವಾಗಿ ರಾಜ್ ಘಾಟ್ ಸಮಾಧಿಯಲ್ಲಿ  ಇಂದು ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು  ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಸ್ವಚ್ಛ ಭಾರತ ಮಿಷನ್ ಅಡಿ ಈ ಕೇಂದ್ರ ಸ್ಥಾಪಿಸಲಾಗಿದ್ದು, ಸ್ವಚ್ಛ ಭಾರತ ಕುರಿತು ಕಿರುಚಿತ್ರವನ್ನೂ ಈ ಸಂದರ್ಭದಲ್ಲಿ ಮೋದಿ ವಿಕ್ಷಿಸಿದರು.
ರಾಷ್ಟ್ರೀಯ ಸ್ವಚ್ಛತಾ ಕೇಂದ್ರ, ಸ್ವಚ್ಛ ಭಾರತ ಮಿಷನ್ ಕುರಿತು ಮುಂದಿನ ಪೀಳಿಗೆ, ಜಗತ್ತಿನಾದ್ಯಂತ ಉತ್ತಮ ನಡವಳಿಕೆಯ ಪ್ರಚಾರ ಮಾಡಲು ಯಶಸ್ವಿಯಾಗುತ್ತದೆ.
ರಾಷ್ಟ್ರೀಯ ಸ್ವಚ್ಛತಾ ಕೇಂದ್ರದಲ್ಲಿ ಸ್ವಚ್ಛ ಭಾರತ ಕುರಿತು ಮಾಹಿತಿ, ಅರಿವು ಹಾಗೂ ಶಿಕ್ಷಣ ನೀಡುವ ಉದ್ದೇಶದಿಂದ ಕಥೆ ಹಾಗೂ ಸಂದೇಶಗಳನ್ನು ಡಿಜಿಟಲ್ ಹಾಗೂ ಹೊರಾಂಗಣ ನಾಟಕಗಳ ಮೂಲಕ ಪ್ರಸ್ತುತ ಪಡಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು

 

(ಚಿತ್ರ ಕೃಪೆ: ಎಎನ್ ಐ)

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!