Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

PFI ಬ್ಯಾನ್ ಶ್ರೀ ರಾಮಸೇನೆ ಸ್ವಾಗತ

ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ತನ್ನ ಷರಿಯತ್ ಕಾನೂನನ್ನು ಪ್ರತಿಪಾದಿಸುತ್ತಾ ಬಂದಿರುವ, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾ, ನಿರಂತರವಾಗಿ ಹಿಂದೂ ನಾಯಕರು ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದ ಪಿಎಫ್ ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರಕಾರವು ದೇಶದಲ್ಲಿ ಬ್ಯಾನ್ ಮಾಡಿರೋದನ್ನು ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಸ್ವಾಗತಿಸುತ್ತದೆ.

ಭಾರತ ದೇಶದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು, ದೇಶದ್ರೋಹಿ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡು, ಉಗ್ರಗಾಮಿ ಸಂಘಟನೆಗಳಿಗೆ ತನ್ನ ಕಾರ್ಯಕರ್ತರನ್ನು ಕಳುಹಿಸುತ್ತಿದ್ದ, ಹಿಂದುಗಳನ್ನು ಹತ್ಯೆ ಮಾಡಿ ನಿರಂತರವಾಗಿ ಹಿಂದುಗಳಲ್ಲಿ ನಡುಕ ಹುಟ್ಟಿಸುತ್ತಿದ್ದವರು ಇದೇ ಪಿ ಎಫ್ ಸಂಘಟನೆಯವರು. ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಪ್ರಕರಣ ಸಹ ಇದೇ ಪಿ ಎಫ್ ಐ ಅವರ ಕೊಡುಗೆ, ಇದರಿಂದ ವಿಶ್ವದಲ್ಲೇ ಭಾರತದ ಹೆಸರನ್ನು ಕೆಡಿಸಲು ಪ್ರಯತ್ನಿಸಿದ ಇಂತಹ ಸಂಘಟನೆಯನ್ನು ಕೇವಲ ಐದು ವರ್ಷ ಅಲ್ಲ ಶಾಶ್ವತವಾಗಿ ಬ್ಯಾನ್ ಮಾಡಬೇಕೆಂದು ಉಡುಪಿ ಜಿಲ್ಲಾ ಶ್ರೀರಾಮ್ ಸೇನೆ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!