ಅರ್ಥಪೂರ್ಣ ಅರ್ವತ್ತರ ಆಚರಣೆ

ಬಡಗು ತಿಟ್ಟಿನ ಪ್ರಸಿದ್ದ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಅಭಿಮಾನಿಬಳಗ ದೊಡ್ಡದು. ಅವರ ಊರಿನ’ಶ್ರೀ ಸದ್ಗುರು ಗೆಳೆಯರ ಬಳಗ ಹೊನ್ನಾವರ ‘ ಕೊಂಡದಕುಳಿ ಅರ್ವತ್ತರ ಸಂಭ್ರಮ ಆಚರಿಸಲು ಮುಂದಾದಾಗ ಹಮ್ಮಿಣಿ ನನಗೆ ಸಮರ್ಪಿಸುವುದು ಬೇಡ ಎಂದು ಔದಾರ್ಯ ಮೆರೆದರು. ಆ ಸಂದರ್ಭದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಮತ್ತು ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ತಲಾ ರೂ 50000 ದೇಣಿಗೆ ನೀಡಿದ್ದರು.ಇಬ್ಬರು ಅನಾಥ ವಿದ್ಯಾರ್ಥಿಗಳಿಗೆ ತಲಾ ರೂ 60000 ಸಹಾಯಧ ನೀಡಿ ಅವರ ಕಲಿಕೆಗೆ ಅವಕಾಶ ಕಲ್ಪಿಸಿದ್ದರು. ಐವತ್ತರ ಆಚರಣೆಯಲ್ಲೂ ಸಂಸ್ಥಗೆ ರೂ.50000 ನೀಡಿದ್ದರು.ಈಗ ರೂ.25000 ವೆಚ್ಚದಲ್ಲಿ ಅರವತ್ತರ ಆಚರಣೆಯ ನೆನಪಿನ ಬಸ್ ತಂಗುದಾಣ ನಿರ್ಮಾಣ ಗೊಂಡಿದೆ.ಇಂತಹದೆ ಇನ್ನೂ ಮೂರು ಬಸ್ ತಂಗುದಾಣಗಳು‌‌ ನಿರ್ಮಾಣವಾಗಲಿವೆ.ಒಬ್ಬ ಕಲಾವಿದ ಸಮಾಜದ ಅವಶ್ಯಕತೆಗೆ ಯಾವೆಲ್ಲ ರೀತಿಯಲ್ಲಿ ಸ್ಪಂದಿಸ ಬಹುದೆಂಬುದಕ್ಕೆ ಕೊಂಡದಕುಳಿಯವರು ಮಾದರಿಯಾಗಿದ್ದಾರೆ. ಶ್ರೇಷ್ಠ ಕಲಾವಿದನ ಸಮಾಜಮುಖಿ ಕಳಕಳಿಗೆ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದಿಸಿದೆ.

Leave a Reply