ನಮ್ಮೆಲ್ಲರಿಗೆ ’ಪರಿಸರ ಪ್ರಜ್ಞೆ’ ಅತಿ ಅಗತ್ಯ- ರೋಟರಿ ಗವರ್ನರ್ ಎಂ.ಜಿ. ರಾಮಚಂದ್ರ ಮೂರ್ತಿ

ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಮ್ಮ ಪರಿಸರಕ್ಕೆ ಸಂಬಂಧಿಸಿದವು ಅತಿ ಮುಖ್ಯವಾದುವು. ಈ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳ ಅರಿವು ಸರ್ ಸರ್ವರಿಗೂ ಅಗತ್ಯ. ಅಂತೆಯೇ ಅಂತರಾಷ್ಟೀಯ ರೋಟರಿ ಸಂಘಟನೆ ” ಪರಿಸರ ಸಂಬಂಧಿ ಕಾರ‍್ಯಕ್ರಮಗಳಿಗೆ ಒತ್ತು ಕೊಟ್ಟಿದೆ ಎಂಬುದಾಗಿ ರೋಟರಿ ಜಿಲ್ಲೆ ೩೧೮೨ ರ ರಾಜ್ಯಪಾಲ ರೋ. ಎಂ.ಜಿ. ರಾಮಚಂದ್ರ ಮೂರ್ತಿ ಅಭಿಪ್ರಾಯಪಟ್ಟರು.

ಪೂರ್ಣಪ್ರಜ್ಞ ರೋಟರಿ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರ ಪೂರ್ಣಪ್ರಜ್ಞ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಹಾಗೂ ಕರ್ನಾಟಕ ಬ್ಯಾಂಕ್ ಆಯೋಜಿಸಿದ್ದ ’ ಸಂಸ್ಥೆಗೆ ರಾಜ್ಯಪಾಲರ ಸಂದರ್ಶನ ಹಾಗೂ ಹೊಲಿಗೆ ಯಂತ್ರಗಳ ವಿತರಣಾ ಸಮಾರಂಭದಲ್ಲಿ’ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪೂರ್ಣಪ್ರಜ್ಞ ರೋಟರಿ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರ ನಡೆಸುತ್ತಿರುವ ಸಮಾಜಮುಖೀ ಕಾರ‍್ಯಕ್ರಮಗಳನ್ನು ಅವರು ಶ್ಲಾಘಿಸಿದರು.

ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊತಾಯ, ಕೇಂದ್ರದ ಧ್ಯೇಯೋದ್ದೇಶಗಳನ್ನು ತಿಳಿಸಿ, ಕಳೆದ ಒಂದು ವರ್ಷದಲ್ಲಿ ನಡೆದ ಚಟುವಟಿಕೆಗಳ ಬಗೆಗೆ ತಿಳಿಸಿದರು. ವಲಯ ಸೇನಾನಿ ರೋ ಅಮಿತ್ ಅರವಿಂದರವರು ರಾಜ್ಯಪಾಲರನ್ನು ಸಭೆಗೆ ಪರಿಚಯಿಸಿದರು. ಸಮುದಾಯ ಸೇವೆಗಳ ನಿರ್ದೇಶಕ ರೋ. ರಾಜವರ್ಮ ಹೊಲಿಗೆ ಯಂತ್ರಗಳ ಯೋಜನೆ ಬಗೆಗೆ ತಿಳಿಸಿದರು. ಆಯ್ದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ನಿಯೋಜಿತ ಜಿಲ್ಲಾ ರಾಜ್ಯಪಾಲೆ ರೋ. ಡಾ. ಗೌರಿ, ರೋಟರಿ ಮಣಿಪಾಲದ ಕಾರ್ಯದರ್ಶಿ ರೋ. ರೆಹಮಾನ್ ಇನ್ನಿತರ ರೋಟರಿ ಸದಸ್ಯರು, ಪೂರ್ಣಪ್ರಜ್ಞ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ವಿದ್ಯಾರ್ಥಿ ಪ್ರಾಧ್ಯಪಕ ವೃಂದದವರು ಹಾಜರಿದ್ದರು. ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ರೋ. ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿ, ಪೂರ್ಣ ಪ್ರಜ್ಞ ಇನ್ ಸ್ಟಿಟ್ಯೂಟ್ ಅಫ್ ಮ್ಯಾನೇಜ್ ಮೆಂಟ್ ನ ನಿರ್ದೇಶಕ ಡಾ. ಭರತ್ ವಿ ವಂದಿಸಿದರು. ಎಂ.ಬಿ.ಎ ವಿದ್ಯಾರ್ಥಿನಿ ಶ್ರುತಿರಾಜ್ ಕಾರ‍್ಯಕ್ರಮ ನಿರ್ವಹಿಸಿದ್ದರು.

 
 
 
 
 
 
 
 
 
 
 

Leave a Reply