ವಿಶ್ವಾಸ ಮತ್ತು ನಂಬಿಕೆಯೇ ಸಹಕಾರಿ ಕ್ಷೇತ್ರದ ಜೀವಾಳ: ಶಾಸಕ ಕೆ.ರಘುಪತಿ ಭಟ್

ಸಹಕಾರಿಯ ಆಡಳಿತ ಮಂಡಳಿಯು ವಿಶ್ವಾಸಾರ್ಹವಾಗಿದ್ದಾಗ ಸಂಸ್ಥೆಯು ಯಶಸ್ಸಿನ ಪಥದಲ್ಲಿ ಮುನ್ನಡೆದು ಉತ್ತಮ ಹಂತವನ್ನು ತಲುಪಲು ಸಾಧ್ಯವಾಗುತ್ತದೆ. ವಿಶ್ವಾಸ ಮತ್ತು ನಂಬಿಕೆಯೇ ಸಹಕಾರಿ ಕ್ಷೇತ್ರದ ಜೀವಾಳ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ಆ.28ರಂದು ಬ್ರಹ್ಮಾವರದ ಎಸ್.ಎಂ.ಎಸ್. ಚರ್ಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಉಡುಪಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕರ್ನಾಟಕ ಸರಕಾರದ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜ್ಯೋತಿ ಬೆಳಗಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಉಡುಪಿಯನ್ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ(ನಿ.) ಅಧ್ಯಕ್ಷ ಸಚಿನ್ ಪೂಜಾರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ಮುಖ್ಯ ಅತಿಥಗಳಾಗಿ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಪ್ರಮೋದ್‌ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ; ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ; ಶ್ರೀಮತಿ ವೀಣಾ ವಿ. ನಾಯ್ಕ್, ಅಧ್ಯಕ್ಷರು, ಬಿಜೆಪಿ ಉಡುಪಿ ಗ್ರಾಮಾಂತರ; ಬಿ.ಎನ್‌. ಶಂಕರ ಪೂಜಾರಿ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ; ಶಿರಿಯಾರ ಗಣೇಶ್ ನಾಯಕ್‌, ಮಾಲಕರು, ದೀಪ್ತಿ ಎಂಟರ್‌ಪ್ರೈಸಸ್‌; ಬಿರ್ತಿ ರಾಜೇಶ್ ಶೆಟ್ಟಿ, ನಿರ್ದೇಶಕರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.); ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಅಧ್ಯಕ್ಷರು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.); ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಕೋ-ಆಪರೇಟಿವ್ ಯೂನಿಯನ್; ಸಿ.ಎ. ದೇವ್ ಆನಂದ್, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ (2024-25); ಸಿ.ಎ. ಜೀವನ್ ಶೆಟ್ಟಿ, ಚಾರ್ಟೆಡ್ ಅಕೌಂಟೆಂಟ್, ಉಡುಪಿ; ಉಮೇಶ್ ಎ. ನಾಯ್ಕ್, ಸ್ನೇಹ ಟುಟೋರಿಯಲ್ ಉಡುಪಿ; ಶ್ರೀಮತಿ ನಳಿನಿ ಪ್ರದೀಪ್ ರಾವ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ; ಶ್ರೀಮತಿ ನಾಗವೇಣಿ, ಅಧ್ಯಕ್ಷರು, ವಾರಂಬಳ್ಳಿ ಗ್ರಾಮ ಪಂಚಾಯತ್; ದೇವಾನಂದ ಉಪಾಧ್ಯಕ್ಷರು, ವಾರಂಬಳ್ಳಿ ಗ್ರಾಮ ಪಂಚಾಯತ್ ಹಾಗೂ ಸೊಸೈಟಿಯ ಉಪಾಧ್ಯಕ್ಷ ಮೋಹನ್ ಖಾರ್ವಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್, ನಿರ್ದೇಶಕರುಗಳಾದ ಧೀರಜ್ ಕುಮಾರ್ ಶೆಟ್ಟಿ, ರಾಜು ಪೂಜಾರಿ, ಸುದರ್ಶನ್, ವಿಶ್ವನಾಥ್ ಕಲ್ಮಾಡಿ, ರಮಾನಾಥ ಖಾರ್ವಿ, ಕೇಶವ ಆಚಾರ್ಯ, ನಂದು ಖಾರ್ವಿ, ವೀಣಾ ವಿ. ನಾಯ್ಕ್, ಗೀತಾ ನಾರಾಯಣ ಪೂಜಾರಿ, ಜ್ಯೋತಿ, ಕಿಶೋರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply