ಕಾಶ್ಮೀರ 370ವಿಧಿ ರದ್ಧತಿ ಬಳಿಕ ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಡಾಕ್ ರಾಜಧಾನಿ ಲೇಹ್ ನಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಭರವಸೆಗಳ ಸಮಿತಿ ಅಧ್ಯಯನ ಸಭೆ
ಕರ್ನಾಟಕ ವಿಧಾನ ಸಭೆಯ ಸರ್ಕಾರಿ ಭರವಸೆ ಸಮಿತಿಯ ಅಧ್ಯಯನ ತಂಡವು ದಿನಾಂಕ 01- 07-2022 ರಂದು ಕಾಶ್ಮೀರದ 370ವಿಧಿಯ ರದ್ಧತಿಯ ಬಳಿಕ ನೂತನವಾಗಿ ಅಸ್ಥಿತ್ವಕ್ಕೆ ಬಂದ ಕೇಂದ್ರಾಡಳಿತ ಪ್ರದೇಶ ಲಡಾಕ್ ಗೆ ಭೇಟಿ ನೀಡಿತು.
ಕಾಶ್ಮೀರದ 370ವಿಧಿಯ ರದ್ಧತಿಯ ಬಳಿಕ ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಲ್ಲಿನ ಇಂದಿನ ಪ್ರಸ್ತುತ ಸಾಮಾಜಿಕ ಸ್ಥಿತಿಗತಿ, ಕೃಷಿ, ಶಿಕ್ಷಣ, ನೀರಾವರಿ, ಪ್ರವಾಸೋಧ್ಯಮ, ವ್ಯಾಪಾರ ಹಾಗೂ ಸಮಗ್ರ ಅಭಿವೃದ್ಧಿಯ ವಿಷಯಗಳ ಕುರಿತು ಅಧ್ಯಯನ ನಡೆಸಿದರು. ಕೇಂದ್ರಾಡಳಿತ ಪ್ರದೇಶ ಲಡಾಕ್ ನ ರಾಜಧಾನಿ ಲೇಹ್ ನಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಮುಖ್ಯ ಸಲಹೆಗಾರರಾದ ಶ್ರೀ ಉಮಂಗ್ ನುರುಲ್ಹಾ ಅವರನ್ನು ಲಡಾಕ್ ನ ಸಂಸದರಾದ ಶ್ರೀ ಜಮ್ಯಂಗ್ ತೆಸ್ರಿಂಗ್ ನಂಗ್ಯಾಲ್ ಅವರೊಂದಿಗೆ ಭೇಟಿ ಮಾಡಿ ಲೇಹ್ ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಯಲ್ಲಿ ಸಭೆ ನಡೆಸಿ ಅಧ್ಯಯನದ ವಿಷಯದ ಕುರಿತು ಚರ್ಚಿಸಿ ಎರಡು ರಾಜ್ಯಗಳ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಲೇಹ್ ಲೆಫ್ಟಿನೆಂಟ್ ಗವರ್ನರ್ ಅವರ ಮುಖ್ಯ ಸಲಹೆಗಾರರಾದ ಶ್ರೀ ಉಮಂಗ್ ನುರುಲ್ಹಾ ಲೇಹ್ ನ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಪುಸ್ತಕವನ್ನು ಭರವಸೆಗಳ ಸಮಿತಿ ಸದಸ್ಯರು/ಶಾಸಕರಿಗೆ ನೀಡಿದರು.