ಪರಿಸರ ಸಂರಕ್ಷಣೆಯಲ್ಲಿಯುವ-ಶಕ್ತಿಯಉತ್ಸಾಹ ನಿರಂತರವಿರಲಿ- ರಾಘವೇಂದ್ರ ಬಿ.ವಿ.ಟಿ ಮಣಿಪಾಲ

ಕೋಟ: ವಿಶ್ವ ಪರಿಸರದ ದಿನಾಚರಣೆಯು ಸರಕಾರಿ ಪ್ರೌಢ ಶಾಲೆಯಲ್ಲಿ ಹಸಿರು ಇಕೋ-ಕ್ಲಬ್ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದಗಿಡ ನೆಡುವುದರೊಂದಿಗೆ ಜರುಗಿತು.ಪ್ರಕೃತಿ ನಮ್ಮ ಬದುಕಿನ ಜೀವಾಳ ಪ್ರಕೃತಿಯಿಂದ ನಾವು ನಮ್ಮಿಂದ ಪ್ರಕೃತಿಅಲ್ಲ ಈ ನಿಟ್ಟಿನಲ್ಲಿಗಿಡ ನೆಟ್ಟು ಹಸಿರನ್ನು ಬೆಳೆಸಿ ನಮ್ಮ ಜೀವನವನ್ನು ಹಸನುಗೊಳ್ಳಬೇಕು.ಅದಕ್ಕಾಗಿ ಪ್ರಕೃತಿ, ಸಂಸ್ಕçತಿ ಬೆಳಸಿಕೊಂಡು ವಿಕೃತಿಯನ್ನು ಮರೆಮಾಚಬೇಕು. ಪ್ಲಾö್ಯಸ್ಟಿಕ್ ನಿಶೇಧ, ಜಲಸಂರಕ್ಷಣೆ, ಮುಂತಾದಅರಿವು ಬಾಲ್ಯದ ಶಿಕ್ಷಣದಲ್ಲಿ ನೀಡಬೇಕಿದೆ.
ಇಂತಹ ಮಹಾನ್ ಕಾರ್ಯ ಮಾಡಿದವರಲ್ಲಿ ಸಾಲುಮರದ ತಿಮ್ಮಕ್ಕ ಇವರನ್ನು ಆದರ್ಶವಾಗಿಟ್ಟು ಕೊಂಡು ಮಕ್ಕಳು ಪರಿಸರದ ಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ತರಬೇತುದಾರರು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರುತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಆನಂದ ಶೆಟ್ಟಿ ಮುಖ್ಯೋಪಾಧ್ಯಾಯರು ನಿರ್ವಹಿಸಿದ್ದು, ಶಾಲೆಯಲ್ಲಿ ಗಿಡಗಳನ್ನು ನೆಡುದರ ಮೂಲಕ ಪರಿಸರ ಕಾಳಜಿ ನಡೆಸುವಂತೆ ಪ್ರಾತ್ಯಕ್ಷಕೆಯಗಿ ಪ್ರತಿ ಮಕ್ಕಳಿಗೆ ಒಂದೊoದುಗಿಡವನ್ನು ನೆಡಿಸಿ ಗಿಡದ ಸಂರಕ್ಷಣೆ ಹೊಣೆಯನ್ನು ವಿದ್ಯಾರ್ಥಿಗಳ ಹೆಸರನ್ನು ನೇಮ್ ಬೋರ್ಡ್ ಮೂಲಕ ಸಸ್ಯ ಪೋಷಣೆ ಅರಿವು ತಿಳಿಸಿದರು. ಇಕೊ-ಕ್ಲಬ್‌ನ ಅಧ್ಯಕ್ಷ ಯಶವಂತ್ ೧೦ನೇ ತರಗತಿ ಸ್ವಾಗತಿಸಿದರು. ಮಾರ್ಗದರ್ಶಕ ಶಿಕ್ಷಕರಾದ ಶರತಇವರು ಪ್ರಾಸ್ತವಿಕ ಮಾತನಾಡಿದರು.

ಚುನಾವಣಾ ಸಾಕ್ಷರತಾ ಕ್ಲಬ್ ಅಧ್ಯಕ್ಷ ಶ್ರಾವ್ಯ ವಂದಸಿದರು. ನoತರ ವಿದ್ಯಾರ್ಥಿಗಳು ಪರಿಸರಗೀತೆಯನ್ನು ಹಾಡಿದರು. ತೇಜಸ್ವಿನಿ ಪರಿಸರಕ್ಕೆ ಸಂಬoಧಿಸಿದ ಸ್ಲೊಗನ್ ಮಕ್ಕಳಿಗೆ ಸಾಮೂಹಿಕವಾಗಿ ಹೇಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರದ ಸುಧಾಕರ್, ಗೀತಾ ಶೆಟ್ಟಿ, ಭಾರತಿ, ಹೆರಿಯ ಮಾಸ್ಟರ್, ಗೀತಾ ನಾಯ್ಕ್ ಉಪಸ್ಥಿರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದರು.

 
 
 
 
 
 
 
 
 

Leave a Reply