ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ  ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯುನಿಸೆಫ್ ನ ಸಹಯೋಗದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ವಿದ್ಯಾರ್ಥಿಗಳಿಗಾಗಿ
ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯರಾದ ಡಾ.ಮಾನಸ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ‘ನೀರಿನ ಸರಕ್ಷತೆ – ಕೋವಿಡ್ ಮತ್ತು ಋತುಮಾನದಲ್ಲಿ ಕಂಡುಬರುವ ಸೋಂಕುರೋಗಗಳ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ರೇಡಿಯೋ ಮಣಿಪಾಲದ ಜಾಗೃತಿ ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದರು. ಶಾಲಾ ಶಿಕ್ಷಕರಾದ ಹರಿಶ್ಚಂದ್ರ ಬಾಯರಿ, ಶೈಲಜ, ಮತ್ತು ಸ್ವಚ್ಛ ಬ್ರಿಗೇಡ್ ಕಾರ್ಕಳದ ಸಕ್ರಿಯ ಸದಸ್ಯೆ ಸುನೀತ ಅಂಡಾರು ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿಗಳು ಸಹಕರಿಸಿದರು.
..

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ.

Leave a Reply