ಶ್ರೀ ವೆಂಕಟಕೃಷ್ಣನಿಗೆ ಅಮೂಲ್ಯ ಕಿರೀಟ ಅರ್ಪಣೆ

ಪೂಜ್ಯ ಪುತ್ತಿಗೆಶ್ರೀಪಾದರು ಅಮೆರಿಕಾದ ಫೀನಿಕ್ಸ್ ನಗರದಲ್ಲಿ ಸ್ಥಾಪಿಸಿದ ಪ್ರಥಮ ದೇವಾಲಯದಲ್ಲಿ ಪೂಜೆ ಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಲ್ಲಿಯ ಭಕ್ತೆ ಶ್ರೀಮತಿ ಅನಿಲಾ ದಂಪತಿಗಳು 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಇಂದು ಅರ್ಪಿಸಿದರು
ಶ್ರೀ ವೆಂಕಟೇಶ್ವರ ನ ಅನುಗ್ರಹದಿಂದ ಅರ್ಪಿಸಿದ ಕುಟುಂಬಕ್ಕೂ ಲೋಕಕ್ಕೂ ಕಲ್ಯಾಣವಾಗಲಿ ಎಂದು ಪೂಜ್ಯ ಶ್ರೀಪಾದರು ಹಾರೈಸಿದರು .

ಈ ಅಮೂಲ್ಯ ದುಬಾರಿಯ ಕಿರೀಟ ಜನವರಿ ಒಂದರಂದು (1-1-2023)
ಶ್ರೀ ವೆಂಕಟೇಶನ ಮುಕುಟವನ್ನಲಂಕರಿಸಲಿದೆ .

ಪ್ರಧಾನ ಅರ್ಚಕರಾದ ಕಿರಣಾಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply