Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಕೋಟಿಗೀತಾಲೇಖನಯಜ್ಞ ದೀಕ್ಷೆಯ ಪ್ರಚಾರ ಅಭಿಯಾನಕ್ಕೆ ಶ್ರೀ ಪುತ್ತಿಗೆ ಶ್ರೀಪಾದರಿಂದ ಚಾಲನೆ 

ಶ್ರೀ ಪುತ್ತಿಗೆ ಮಠದ  ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು 2024 ಜನೆವರಿ 18 ರಿಂದ ಪ್ರಾರಂಭಗೊಳ್ಳಲಿರುವ  ತಮ್ಮ ನಾಲ್ಕನೆಯ ಶ್ರೀ ಕೃಷ್ಣ ಪೂಜಾ ಪರ್ಯಾಯ ಸಂಭ್ರಮದ ನಿಮಿತ್ತ ವಾಗಿ ಶ್ರೀ ಕೃಷ್ಣನ ಮುಖಾರವಿಂದದಿಂದಲೇ  ಹೊರಹೊಮ್ಮಿದ, ವಿಶ್ವ ಶಾಂತಿಯನ್ನ ಸಾರುವ ಅಮೃತ ಮಯವಾದ ಶ್ರೇಷ್ಠ ಗ್ರಂಥವಾದ ಶ್ರೀಮದ್ ಭಗವದ್ಗೀತಾ ಗ್ರಂಥವನ್ನು  ಪ್ರತಿಯೊಬ್ಬರ ಮೂಲಕ ಬರಿಸುವಂತಹ *ಕೋಟಿ ಗೀತಾ ಲೇಖನ ಯಜ್ಞ ಎಂಬ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.  
ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ  ಐದು ತಂಡಗಳು  ಈ ಅಭಿಯಾನವನ್ನು  ನಡೆಸುತ್ತಾರೆ. ಈ ಮಾರ್ಗದಲ್ಲಿ ಬರುವಂತಹ ಎಲ್ಲ ಊರಿನ ಭಕ್ತರನ್ನು ಸಂಪರ್ಕ ಮಾಡಿ ಇದರಲ್ಲಿ ಭಕ್ತರನ್ನು ನೋಂದಣಿ ಮಾಡು ವಂತಹ ಬೃಹತ್ ಯೋಜನೆ ಪ್ರಾರಂಭವಾಗುತ್ತಿದೆ. ಡಾ.ಬಿ.ಗೋಪಾಲಾಚಾರ್, ಶ್ರೀರಮಣ ಆಚಾರ್ಯ, ಚಂದನ್ ಕಾರಂತ್, ಮಹಿತೋಷ ಆಚಾರ್ಯ, ಶ್ರೀ ಕೆ. ರಮೇಶ್ ಭಟ್ ನೇತೃತ್ವದ ಒಟ್ಟು ಐದು ತಂಡಗಳು ಕಾರ್ಯಾಚರಣೆ ನಡೆಸಲಿದೆ.  
ಭಗವಂತ ಶ್ರೀ ಕೃಷ್ಣ ವ್ಯಕ್ತಿಯ ಪರ ಅಲ್ಲ.  ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ.  ಹೀಗಾಗಿ ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ.  ಸನ್ಮತಿ ನೀಡುವ ಗ್ರಂಥ  ಪ್ರತಿಯೊಬ್ಬರೂ ಭಗವದ್ಗೀತೆಯ ಪರಿಜ್ಞಾನ ಹೊಂದುವುದು ಅಗತ್ಯ ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಅಹಂಕಾರ ಮತ್ತು ಮಮಕಾರ.  ಎಲ್ಲವೂ ಭಗವಂತನ ಅಧೀನ ಎಂದು ತಿಳಿದರೆ ಮನುಷ್ಯನಿಗೆ ಅಹಂಕಾರ ಬರಲು ಸಾಧ್ಯವಿಲ್ಲ.  ಹೀಗಾಗಿ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ ಎಂದು ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ರಥಬೀದಿಯ ಶ್ರೀ ಪುತ್ತಿಗೆ ಮಠದಲ್ಲಿ ಕೋಟಿಗೀತಾ ಲೇಖನ ಅಂಗವಾಗಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು 
 
ಪುತ್ತಿಗೆ ಮಠದ  ಮುಂದಿನ ಪರ್ಯಾಯದ ಯೋಜನೆಯನ್ನು ಪುತ್ತಿಗೆ ಶ್ರೀಗಳು ಪ್ರಕಟಿಸಿದರು. ಕೋಟಿ  ಜನರಿಂದ ಭಗವದ್ಗೀತೆ ಬರೆಸುವುದು. ಅಂತಾರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ. ಭಗವದ್ಗೀತೆ ಯಾಗ. ಅಖಂಡ ಗೀತಾ ಪಾರಾಯಣ ಕಲ್ಸ೦ಕದಿಂದ ಕೃಷ್ಣ ಮಠಕ್ಕೆ ಬರುವಲ್ಲಿ ಭವ್ಯ ಸ್ವಾಗತ ಗೋಪುರ ಹಾಗು ಮಧ್ವಾಚಾರ್ಯರ ಪ್ರತಿಮೆ ಸ್ಥಾಪನೆ.  
 
ಈ ಸಮಾರಂಭದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್, ಯಶ್ ಪಾಲ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ಯೋಗೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಉಪಸ್ಥಿತರಿದ್ದರು.  ನಿರೂಪಿಸಿದರು.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!